ವಿಜಯಪುರ : ಸಿಎಂ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡುತ್ತಿದ್ದು ಆ ಕಾರಣದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಪುಟ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಹೇಳಿಕೆ ನೀಡಿದ್ದರು. ಇವರ ಒಂದು ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದು, ಸಿಎಂ ಸಿದ್ದರಾಮಯ್ಯನವರು ಕಟ್ಟಿದ್ದಾರೆ ಅವರ ಕುರ್ಚಿಯು ಕಟ್ಟಿ ಇದೆ ಈಗ ಅಲಗಾಡುತ್ತಿರುವುದು ಬಿವೈ ವಿಜಯೇಂದ್ರ ಕುರ್ಚಿ ಎಂದು ತಿರುಗೇಟು ನೀಡಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಅವರ ಕುರ್ಚಿಯು ಕೂಡ ಗಟ್ಟಿ ಇದೆ. ಆದರೆ ಈಗ ಅಲುಗಾಡುತ್ತಿರುವುದು ಬಿ ವೈ ವಿಜಯೇಂದ್ರ ಕುರ್ಚಿ ಎಂದು ಬಿ ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ಕೊಟ್ಟರು.
ಈಗ ಬಿವೈ ವಿಜಯೇಂದ್ರ ಕುರ್ಚಿ ಅಲುಗಾಡುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ, ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕುರ್ಚಿ ಅಲಗಾಡುತ್ತಿದೆ ಹೀಗಾಗಿ ವಿಜಯೇಂದ್ರ ಮೊದಲು ತಮ್ಮ ಕುರ್ಚಿ ಕಟ್ಟಿ ಮಾಡಿಕೊಳ್ಳಲಿ ಎಂದು ವಿಜಯಪುರದಲ್ಲಿ ಕೈಗಾರಿಕೆ ಇಲಾಖೆಯ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದರು.