ಬೆಂಗಳೂರು : ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆ ಹಿಂದುತ್ವವಾದಿಗಳಿಂದ ʻತಂದೆಗೆ ಜೀವ ಬೆದರಿಕೆ ಇದೆ’ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸಾವರ್ಕರ್ ಒಬ್ಬ ಮೂಲಭೂತವಾದಿ ದೇಶವನ್ನು ಒಂದುಗೋಡಿಸುವ ಬಗ್ಗೆ ಹೋರಾಡಿದವರಲ್ಲ. ಅವರು ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ದ್ವೇಷ ಇಟ್ಟುಕೊಂಡವರು. ಅವರು ಹೇಳಿಕೆ ನೀಡಿದ್ದು ತಪ್ಪಲ್ಲ. ಹಿಂದೂವಾದಿಗಳ ಬಣ್ಣ ಬಯಲು ಮಡ್ತಿರೋದ್ದಾರೆ. ಹಿಂಸಾತ್ಮಕ ಕೃತ್ಯ ನಡೆಸುವುದು ಆ ಸಂಘಟನೆಗಳಿಗೆ ಗೊತ್ತಿದೆ. ಹಿಂದುತ್ವವಾದಿಗಳಿಂದ ನನ್ನ ತಂದೆಗೆ ಜೀವ ಬೆದರಿಕೆ ಇದೆ. ಹೀಗಾಗಿ ಸರ್ಕಾರ ಸಿದ್ದರಾಮಯ್ಯವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದಿದ್ದಾರೆ.