ಕೊಪ್ಪಳ : “ಸಿದ್ದರಾಮಯ್ಯ ಎಲ್ಲೇ ಚುನಾವಣೆಗೆ ನಿಂತ್ರೂ ಗೆಲುವನ್ನು ಸಾಧಿಸುತ್ತಾರೆ ” ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ
ಕೊಪ್ಪಳದಲ್ಲಿ ಮಾತನಾಡಿರುವ ಅವರು ಆರ್ಥಿಕ ವ್ಯವಸ್ಥೆಯನ್ನು ಸರಳೀಕರಣ ಮಾಡಬೇಕು. ಅದಕ್ಕೆ ಶಕ್ತಿ ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ. ಸಿದ್ದರಾಮಯ್ಯನವರು ಜನಪರ ಯೋಜನೆ ಜಾರಿಗೆ ತಂದಿದ್ದರು.
ಹಲವು ಯೋಜನೆಗಳು ಇನ್ನೂ ಜನರ ಮನಸ್ಸಿನಲ್ಲಿವೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಇರಬೇಕು ಹಾಗೂ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಹಿಟ್ನಾಳ್ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.