ಶಿವಮೊಗ್ಗ : ಇಂದು ಆಯೋಧೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಆಯೋಜಿದು ಈ ನೆಲೆಯಲ್ಲಿ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ರಜೆ ಘೋಷಿಸಿದೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ರಾಜ್ಯದಲ್ಲಿ ಯಾವುದೇ ರಾಜ್ಯ ಇಲ್ಲ ಎಂದು ನಿನ್ನೆ ತಿಳಿಸಿದರು ಇದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿ ಕಾರಿದ್ದು, ಹೇಗೆ ಶ್ರೀ ರಾಮನ ಮೂರ್ತಿ ಅಜರಾಮರವಾಗಿ ಇರುತ್ತದೆಯೋ ಅದೇ ರೀತಿ ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಖಳನಾಯಕರಾಗಿ ಉಳಿಯುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು ಇಡೀ ಪ್ರಪಂಚದ ಹಿಂದುಗಳು ನೆನಪಿಟ್ಟುಕೊಳ್ಳುವಂತಹ ಕಾರ್ಯಕ್ರಮವಾಗುತ್ತಿದ್ದು, ಗುಲಾಮಗಿರಿ ಸಂಕೇತದ ಬಾಬರ್ ಕಟ್ಟಡದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ.ಹಲವು ಹೋರಾಟ ಸಾವಿರಾರು ಜನರ ಬಲಿದಾನವಾಗಿದೆ ಕೇಂದ್ರ ಸರಕಾರಿ ನೌಕರರಿಗೆ ಮೋದಿ ಅರ್ಧ ದಿನ ರಜೆಯನ್ನು ಘೋಷಿಸಿದ್ದಾರೆ. ಅನೇಕ ರಾಜ್ಯ ಸರ್ಕಾರಗಳು ಕೂಡ ಈ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿವೆ.ಆದರೆ ಸಿದ್ದರಾಮಯ್ಯ ಮಾತ್ರ ರಜೆ ಘೋಷಣೆ ಮಾಡಲ್ಲ ಅಂತ ತಿಳಿಸಿದ್ದಾರೆ.
ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಅಜರಾಮರವಾಗಿ ಉಳಿಯುತ್ತದೆ ಅದೇ ರೀತಿ ಸಿದ್ದರಾಮಯ್ಯ ಹೆಸರು ಕಳಂಕಿತವಾಗಿದೆ ಉಳಿಯುತ್ತದೆ. ರಾಮನ ಕೋಟಿ ಕೋಟಿ ಭಕ್ತರು ವೀಕ್ಷಣೆಗೆ ಅಯೋಧ್ಯೆಗೆ ಹೋಗುತ್ತಾರೆ. ಅಯೋಧ್ಯಕ್ಕೆ ಹೋಗಲು ಆಗದವರು ಟಿವಿಯಲ್ಲಿ ವೀಕ್ಷಣೆ ಮಾಡುತ್ತಾರೆ. ಟಿವಿಯಲ್ಲಿ ಕಾರ್ಯಕ್ರಮ ನೋಡಲು ರಜೆ ಅಪೆಕ್ಷಿಸಿದ್ದಾರೆ. ಪರಿಷತ್ ನಾಯಕ ಶ್ರೀನಿವಾಸ್ ಪೂಜಾರಿ ಕೂಡ ಪತ್ರ ಬರೆದಿದ್ದರು.
ನನಗೆ ಯಾವುದೇ ಪತ್ರ ಬಂದಿಲ್ಲ ಯಾರು ರಜೆ ಕೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದ್ದಾರೆ.ಇದು ಹಿಂದೂ ವಿರೋಧಿ ನೀತಿ. ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ಖಳನಾಯಕರಾಗಿ ಉಳಿಯುತ್ತಾರೆ. ಹಠಮಾರಿತನ ಬಿಟ್ಟು ನಾನು ಶ್ರೀ ರಾಮನ ಭಕ್ತನೆಂದು ರಜೆ ಘೋಷಿಸಿ. ಮುಸ್ಲಿಮರ ಓಟು ಹೋಗುತ್ತೇವೆ ರಜೆ ಘೋಷಿಸಿಲ್ಲ ಶ್ರೀ ರಾಮನ ಭಕ್ತರ ಶಾಪ ತಟ್ಟಿದರೆ ನಿಮ್ಮ ಸರ್ಕಾರ ಹೋಗುತ್ತದೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಈ ಸರ್ಕಾರ ಇರುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿ ಕರಿದ್ದಾರೆ.