ಕೋಲಾರ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪಾದಯಾತ್ರೆಗೆ ಅಧಿಕೃತ ಚಲನೆ ನೀಡಲಿದ್ದಾರೆ.ಈ ಮಧ್ಯ 1 ವಾರದಲ್ಲಿ ಸಿದ್ದರಾಮಯ್ಯ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು MLC ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕೆಂದಿದ್ದರು. ಆ ಸಂದರ್ಭದಲ್ಲಿ ಅದೃಷ್ಟವಷಾತ್ ವಾಪಸ್ ಕಳುಹಿಸಲಾಯಿತು. ಇಲ್ಲದಿದ್ದರೆ ಬಂಗಾರದ ಭೂಮಿಯ ಕೋಲಾರಕ್ಕೆ ಕೆಟ್ಟ ಹೆಸರಿನ ಶಾಪ ತಟ್ಟುತ್ತಿತ್ತು ಎಂದರು.
ಮುಡಾ ಯೋಜನೆಯಲ್ಲಿ 1992 – 93 ರಲ್ಲಿ ನೋಟಿಫೀಕೇಷನ್ ಆಗಿದ್ದರೂ ಡಿ ನೋಟಿಫಿಕೇಷನ್ ಜಾರಿಯಾಗಿರಲಿಲ್ಲ. ಅವರಿಗೆ ಆಗಲೇ 40 ಲಕ್ಷ ರೂ 3 ಕುಟುಂಬಗಳಿಗೆ ಪರಿಹಾರ ಘೋಷಿಸಿತ್ತು ಅವರು ಪಡೆಯದೆ ಹೋದಾಗ ನ್ಯಾಯಾಲಯದ ಸೂಚನೆಯಂತೆ ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಲಾಗಿತ್ತು ನಂತರದಲ್ಲಿ ಕುಟುಂಬದವರಿಂದ ಪತ್ರ ಪಡೆದು ಅಕ್ರಮವಾಗಿ ಡಿ. ನೋಟಿಫೀಕೇಷನ್ ಮಾಡಿದರು.
ಈ ನಿವೇಶವನ್ನು ಮುಡಾಗೆ ನೀಡಲಾಗಿತ್ತು ನಂತರದಲ್ಲಿ ವ್ಯವಸಾಯಕ್ಕೆಂದು ವಾಪಸ್ ಪಡೆದಿದ್ದರು, 2016 ರವರೆಗೆ ಸುಮ್ಮನಿದ್ದು ನಂತರ ಅದನ್ನು ನಿವೇಶಗಳಾಗಿ ವಿಂಗಡಿಸಿ ಶೇ 50:50 ಅನುಪಾತದಲ್ಲಿ ಹಂಚಿಕೆ ಮಾಡಿಕೊಂಡು 14 ನಿವೇಶಗಳನ್ನು ನೀಡಲು ಮುಡಾದ ಸಭೆಯ ನಡುವಳಿಕೆಯಲ್ಲೂ ತೀರ್ಮಾನ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ ಅನುದಾನ ನೇರವಾಗಿ ಚಿನ್ನದ ಅಂಗಡಿಗಳಿಗೆ ಹೇಗೆ ವರ್ಗಾವಣೆ ಮಾಡಿದರು. ಅನುದಾನ ದುರ್ಬಳಿಕೆ ಆಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.