ಮಂಗಳೂರು: ಈಗಾಗಲೇ ಸುಳ್ಳು ದೂರು ನೀಡಿದ್ದ ಕಾರಣದಿಂದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಹೀಗೆಯೇ ಮುಂದಿನ ಚುನಾವಣೆ ವೇಳೆಗೆ ಸಿದ್ಧರಾಮಯ್ಯ ( Siddaramaiah ) ಕೂಡ ಜೈಲು ಸೇರಲಿದ್ದಾರೆ. ಯಾಕೆಂದರೇ ಅವರ ಎಲ್ಲಾ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ ನೋಡುತ್ತಾ ಇರಿ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗುತ್ತಿಗೆಯಲ್ಲಿ ಶೇ.40 ಪರ್ಸೆಂಟ್ ಕಮೀಷನ್ ಕೊಡಬೇಕು ಎಂಬುದಾಗಿ ಕೆಂಪಣ್ಣ ಆರೋಪಿಸಿದ್ದರು. ಅಲ್ಲದೇ ಕೇಸ್ ಕೂಡ ಹಾಕಿದರು. ಈ ಬಗ್ಗೆ ದಾಖಲೆಗಳಿದ್ದರೇ ಲೋಕಾಯುಕ್ತಕ್ಕೆ ದೂರು ಕೊಡುವಂತೆಯೂ ನಾವು ಹೇಳಿದ್ದೆವು. ಒಂದು ವೇಳೆ ದಾಖಲೆ ನೀಡಿದ್ದೇ ಆದ್ರೇ ಯಾರೇ ಪ್ರಭಾವಿ ಶಾಸಕ, ಸಚಿವನಾಗಿದ್ದರೂ ಕಿತ್ತೆಸೆಯುತ್ತೇವೆ ಎಂದು ಹೇಳಿದ್ದವೆ. ಆದ್ರೇ ಕಾಂಗ್ರೆಸ್ ನ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಈ ಬಗ್ಗೆ ಗಲಾಟೆ ಮಾಡಿಲ್ಲ, ಲೋಕಾಯುಕ್ತಕ್ಕೆ ದೂರು ನೀಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಿತಾಮಹವಾಗಿದೆ. ಅಲ್ಲದೇ ಭಯೋತ್ಪಾದಕರ ಪಕ್ಷವಾಗಿದೆ. ಇದೇ ಕಾಂಗ್ರೆಸ್ ಪಕ್ಷದಿಂದಲೇ ಅಡಕೆ ಹಾನಿಕಾರಕ ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿತ್ತು. ಈಗ ಅಡಕೆ ಬೆಳೆಗಾರರ ಪರ ಹೋರಾಟ ಮಾಡುವ ನಾಟಕವಾಡುತ್ತಿದೆ ಎಂದು ಕಿಡಿಕಾರಿದರು.
Siddeshwara Swamiji: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ: ಕಿಲೋ ಮೀಟರ್ ಗಟ್ಟಲೇ ಕ್ಯೂ
BIGG NEWS: ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ
ನಡು ರಸ್ತೆಯಲ್ಲೇ ರೋಮಿಯೋಗಳ ‘ರೊಮ್ಯಾನ್ಸ್’ : ಬೈಕ್ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ..!