ಬಾಗಲಕೋಟೆ: ಅವರು ನಾನೇ ಸತ್ಯ ಹರಿಶ್ಚಂದ್ರನ ಮೊಮ್ಮಗ ಅಂದುಕೊಂಡಿದ್ದಾರೆ, ನನ್ನ ಬಿಟ್ಟರೆ ಯಾರು ಇಲ್ಲ ಅಂತಿದ್ದಾರೆ. ಆದರೆ ಅವರು ಮುಖ್ಯಮಂತ್ರಿ ಆಗೋಕೆ ಅಯೋಗ್ಯವಾದ ವ್ಯಕ್ತಿ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
BREAKING NEWS : ರಾಜ್ಯಾದ್ಯಂತ ಮುಂದುವರೆದ ವರುಣಾರ್ಭಟ : ಹಲವಡೆ ಕೊಚ್ಚಿ ಹೋದ ರಸ್ತೆಗಳು, ಜನಜೀವನ ಅಸ್ತವ್ಯಸ್ತ
ಬಾಗಲಕೋಟೆ ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಎಷ್ಟು ಪಕ್ಷ ಮುಗಿಸಿ ಬಂದವರು. ನಿಮ್ಮ ಜೊತೆ ಬಂದ ನಾಯಕರಾದ ಮೇಟಿ ಅವರನ್ನ ಯಾಕೆ ಬಿಟ್ರಿ. ಚಿಮ್ಮನಕಟ್ಟಿಗೆ ಕೈ ಕೊಟ್ರಿ. ರೇವಣ್ಣನನ್ನು ಎರಡು ದಿನ ಮಂತ್ರಿ ಮಾಡಿ ಯಾಕೆ ಬಿಟ್ರಿ. ವಿಶ್ವನಾಥ್, ರೇವಣ್ಣನನ್ನ ಕಾಂಗ್ರೆಸ್ಗೆ ತಂದು ಮೋಸ ಮಾಡಿದ್ದೀರಿ. ಅವರ ಪಕ್ಷದವರನ್ನೇ ಬಿಡದ ಭಸ್ಮಾಸುರ ಈ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
BREAKING NEWS : ರಾಜ್ಯಾದ್ಯಂತ ಮುಂದುವರೆದ ವರುಣಾರ್ಭಟ : ಹಲವಡೆ ಕೊಚ್ಚಿ ಹೋದ ರಸ್ತೆಗಳು, ಜನಜೀವನ ಅಸ್ತವ್ಯಸ್ತ
ಯಾರು ಸಿದ್ದು ಬಳಿ ಹೋಗ್ತಾರೋ ಅವರೆಲ್ಲಾ ಭಸ್ಮಾಸುರ ಆಗಿದ್ದಾರೆ. ಆದರೆ, ಈ ಭಸ್ಮಾಸುರ ಬಿಜೆಪಿಯಿಂದಲೇ ಸುಟ್ಟು ಹೋಗ್ತಾರೆ. ಮೋದಿ ವಿಶ್ವನಾಯಕ. ಅಂಥವರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡ್ತಿದ್ದಾರೆ. ಮೋದಿಯವರನ್ನು ಎಲ್ಲ ರಾಷ್ಟ್ರಗಳು ಹೊಗಳುವಾಗ ಈ ಕಿಂಚಿತ್ ಸಿದ್ದರಾಮಯ್ಯ ಏಕವಚನದಲ್ಲಿ ಕರೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.