ಹುಬ್ಬಳ್ಳಿ: ಸಿದ್ದರಾಮಯ್ಯ ಪರ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಮತ್ತೆ ಮೊಳಗಿದೆ. ಹುಬ್ಬಳ್ಳಿ ಏರ್ಪೋರ್ಟ್ ನಲ್ಲಿ ನಿನ್ನೆ ರಾತ್ರಿ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜಯಘೋಷದ ಮೂಲಕ ಸ್ವಾಗತ ಕೋರಿದ್ದಾರೆ. ಸಿದ್ದರಾಮಯ್ಯ ಅಭಿಮಾನಿಗಳಿಂದ ಮತ್ತೆ ಘೋಷಣೆ ಕೂಗಿದ್ದಾರೆ.
ಸಿದ್ದರಾಮಯ್ಯ ಬಾದಾಮಿಯಿಂದ ಬೆಂಗಳೂರಿಗೆ ತೆರಳಲು ಆಗಮಿಸಿದ್ದರು. ಈ ವೇಳೆ ಅವರ ಕಾರು ಬರುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಎಂದು ಅಭಿಮಾನಿಗಳು ಕೂಗಿದ್ದಾರೆ. ದಾವಣಗೆರೆ ಸಿದ್ದರಾಮೋತ್ಸವದ ಬಳಿಕ ಇದೇ ಮೊದಲ ಬಾರಿಗೆ ಕೇಳಿ ಬಂದ ಘೋಷಣೆ ಇದು.
ಸಿದ್ದರಾಮಯ್ಯ ಎದುರಿಗೆ ಘೋಷಣೆಗಳನ್ನು ಕೂಗುತ್ತಿದ್ದರೂ ಸಿದ್ದರಾಮಯ್ಯ ಮಾತ್ರ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ.ದಾವಣಗೆರೆ ಸಿದ್ದರಾಮೋತ್ಸವ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತಿ ಪೂಜೆ ಮಾಡಬೇಡಿ.ಯಾರು ಸಿಎಂ ಅಭ್ಯರ್ಥಿ ಘೋಷಿಸಬೇಡಿ ಎಂದು ಸ್ಪಷ್ಟ ಸಂದೇಶ ನೀಡಲಾಗಿತ್ತು.
ಆದ್ರೂ ಇದೀಗ ಮತ್ತೆ ಘೋಷಣೆ ಕೇಳಿ ಬಂದಿರುವುದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.