ಬೆಳಗಾವಿ : ಪ್ರಧಾನಿ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳಿದ್ದರು ಆದರೆ ಕಳೆದ ಹತ್ತು ವರ್ಷದಲ್ಲಿ 20 ಲಕ್ಷ ಉದ್ಯೋಗ ಸಹ ಸೃಷ್ಟಿ ಮಾಡಿಲ್ಲ ಈ ಕುರಿತು ಕೇಳಿದರೆ ಪಕೋಡ ಮಾರಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಬಹಳಷ್ಟು ಮಹತ್ತರವಾದಂತಹ ಚುನಾವಣೆಯಾಗಿದೆ.ನಿಮ್ಮ ಒಂದು ನಿರ್ಧಾರ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದು ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ತಿಳಿಸಿದರು.ನರೇಂದ್ರ ಮೋದಿಯವರು 10 ವರ್ಷ ಪ್ರಧಾನಿಯಾಗಿದ್ದಾರೆ. ಬಡವರು ಮಧ್ಯಮ ವರ್ಗದ ಜನರಿಗೆ ಅವರು ಏನು ಮಾಡಿಲ್ಲ. ಎರಡು ಸಲವೂ ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಿದ್ದರು.ಹಲವು ಭರವಸೆಗಳನ್ನು ನೀಡಿದ್ದರು ಆದರೆ ಈವರೆಗೆ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ಕಪ್ಪು ಹಣ ತಂದು 15 ಲಕ್ಷ ಹಾಕುತ್ತೇನೆ ಎಂದು ಹೇಳಿದ್ದರು. ಪುಣ್ಯಾತ್ಮ ತಂದುಕೊಡಬೇಕಲ್ವಾ? 15 ಪೈಸೆ ಸಹ ಹಾಕಲಿಲ್ಲ.ಇದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮೊದಲನೇ ಸುಳ್ಳು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದರು.ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂದರು.ಕಳೆದ ಹತ್ತು ವರ್ಷದಲ್ಲಿ 20 ಲಕ್ಷ ಉದ್ಯೋಗ ಸಹ ಸೃಷ್ಟಿಸಿಲ್ಲ. ಯಾರಾದರೂ ಕೆಲಸ ಕೇಳಿದರೆ ಪಕೋಡ ಮಾಡೋಕೆ ಕಳಿಸಿ ಅಂತಾರೆ ಇದು ಪ್ರಧಾನಿ ಮೋದಿ ಅವರ ಬೆಜವಾಬ್ದಾರಿ ಹೇಳಿಕೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.