ಬಾಗಲಕೋಟೆ : ಪಂಚಮಸಾಲಿ 2ಎ ಮೀಸಲಾತಿ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲೇ ಪಂಚಮಸಾಲಿ ಸಮುದಾಯದ ಹಲವು ಶಾಸಕರಿದ್ದಾರೆ.ನಿಮಗೆ ಧಮ್ ಇದ್ರೆ ಸಿಎಂ ಸಿದ್ದರಾಮಯ್ಯ ಕಡೆಯಿಂದ ಪಂಚಮಸಾಲಿಗೆ ತ್ರಯ ಮೀಸಲಾತಿ ಘೋಷಿಸಿ ಎಂದು ಬಾಗಲಕೋಟೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಕೋಟ್ಯಾಂತರ ಹಣ ಖರ್ಚು ಮಾಡಲಾಗಿದೆ. ಬಾಗಲಕೋಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟವನ್ನು ಮಾಡಿದ್ದೆವು. ಕೊನೆಗೆ 2ಡಿ ಮೀಸಲಾತಿಗೆ ತಂದು ನಿಲ್ಲಿಸುವುದಕ್ಕೆ ಯಶಸ್ವಿಯಾಗಿದ್ದೇವೆ ಎಂದರು.
ಕಾಂಗ್ರೆಸ್ ನಲ್ಲಿ ಪಂಚಮಸಾಲಿ ಸಮುದಾಯದ ಕೆಲವು ಶಾಸಕರಿದ್ದಾರೆ ನಿಮಗೆ ದಮ್ಮಿದ್ರೆ ಕೊಡಿಸರಪ್ಪ ಮೀಸಲಾತಿ ನಿಮ್ಮದೇ ಸರ್ಕಾರ ಇದೆ ತಾನೇ? ನಿಮಗೆ ದಮ್ಮಿದ್ರೆ ಸಿದ್ದರಾಮಯ್ಯ ಕಡೆಯಿಂದ ಮೀಸಲಾತಿಯನ್ನು ಘೋಷಿಸಿ.ಸಿದ್ದರಾಮಯ್ಯ ಕನಿಷ್ಠ ಪಂಚಮಸಾಲಿ ಸಮುದಾಯದ ಸಭೆ ಸಹ ಕರೆಯಲಿಲ್ಲ. ಅಧಿವೇಶನದ ವೇಳೆ ಸಭೆಗೆ ಕರೆದರೆ ಸಚಿವ ಶಿವಾನಂದ್ ಪಾಟೀಲ್ ಬರಲಿಲ್ಲ ಬೆಳಗಾವಿಯಲ್ಲಿಯೇ ಇದ್ದರೂ ಕೂಡ ಸಚಿವ ಶಿವಾನಂದ್ ಪಾಟೀಲ್ ಸಭೆಗೆ ಬರಲಿಲ್ಲ.
ಮೊನ್ನೆ ಬಾಗಲಕೋಟೆಯಲ್ಲಿ ಇಬ್ಬರು ಹಿಟ್ಲರ್ ಇದ್ದಾರೆ ಅಂದಿದ್ದಾನೆ ರಾಜ್ಯದಲ್ಲಿ ಅಡಾಲ್ಫ್ ಹಿಟ್ಲರ್ ಯಾರಾದರೂ ಇದ್ದರೆ ಅದು ಶಿವಾನಂದ ಪಾಟೀಲ್ ಪಂಚಮಸಾಲಿ ಸಮುದಾಯದ ಯಾರು ಆಮಿಷಕ್ಕೆ ಒಳಗಾಗಬಾರದು ಎಂದು ಬಾಗಲಕೋಟೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.