ಕೊಪ್ಪಳ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಜೊತೆ ಸಿದ್ದರಾಮಯ್ಯ ಸಂಧಾನ ಮಾಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
KRPP ಪಕ್ಷ 10 ಸ್ಥಾನ ಗೆಲ್ಲುತ್ತೆ ಅಂತ ಕಾಂಗ್ರೆಸ್ನವರು ಅಂದುಕೊಂಡಿದ್ದರು.ಹೀಗಾಗಿ ಚುನಾವಣೆಗೆ ಮುನ್ನ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು. ಮುಂದೆ ನಮ್ಮ ಸರ್ಕಾರ ರಚನೆಗೆ ರೆಡ್ಡಿ ಬೇಕಾಗಬಹುದು ಅಂತ ಅಂದುಕೊಂಡಿದ್ದರು. ಹಾಗಾಗಿ ಇಬ್ಬರಿಗೂ ಬೇಕಾಗಿದ್ದ ಓರ್ವ ಕಾಮನ್ ಫ್ರೆಂಡ್ ನನ್ನು ಕಳುಹಿಸಿದ್ದರು. ನಾನು ಜನಾರ್ದನ ರೆಡ್ಡಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದೇನೆ ಹಳೆಯದಲ್ಲವನ್ನು ಮರೆತು ಬಿಡೋಣ ರೆಡ್ಡಿ ವಿರುದ್ಧ ಮಾತನಾಡಲ್ಲ ಗಂಗಾವತಿಯಲ್ಲಿ ಪ್ರಚಾರ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿ ಕಳುಹಿಸಿದ್ದರು.
ಹೀಗಾಗಿ ಸಿದ್ದರಾಮಯ್ಯ ಗಂಗಾವತಿ ಬಳ್ಳಾರಿಗೆ ಪ್ರಚಾರಕ್ಕೆ ಬಂದಿರಲಿಲ್ಲ. ಇಕ್ಬಾಲ್ ಅನ್ಸಾರಿ ಮೆಚ್ಚಿಸಲು ನನ್ನ ಬಗ್ಗೆ ಎರಡು ಮಾತು ಆಡಿದ್ದಾರೆ.ಆದರೆ ನನಗೆ ಸಿದ್ದರಾಮಯ್ಯ ಮೇಲೆ ಯಾವುದೇ ರೀತಿಯಾದ ಸಿಟ್ಟಿಲ್ಲ. ದೇವರ ಮೇಲೆ ಪ್ರಮಾಣ ಮಾಡಲ್ಲ. ನನ್ನ ಮೇಲೆ ಪ್ರಮಾಣ ಮಾಡುತ್ತೇನೆ ಇವರೆಲ್ಲರೂ ಚುನಾವಣೆ ಸಮಯದಲ್ಲಿ ನನ್ನ ಜೊತೆ ಅಡ್ಜಸ್ಟ್ ಆಗಿದ್ದರು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು.