ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಲೀಡರೇ ಅಲ್ಲ. ಈ ರಾಜ್ಯದಲ್ಲಿ ಒಬ್ಬರೇ ಮಾಸ್ ಲೀಡರ್ ಅದು ಯಡಿಯೂರಪ್ಪ ನನಗೆ ಸಿದ್ದರಾಮಯ್ಯ ನಾಯಕ ಅಲ್ವೇ ಅಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ.
BIGG NEWS: 2025ರ ಜೂನ್ಗೆ 175 ಕಿಮೀ ಮೆಟ್ರೋ ಮಾರ್ಗ: ಅಂಜುಂ ಪರ್ವೇಜ್
ನಗರದಲ್ಲಿ ಮಾತನಾಡಿದ ಅವರು, ನಾನು 2008ರಲ್ಲಿ ಗೆದ್ದಾಗಲೇ ನಾಯಕನಾದೆ. ಸಿದ್ದರಾಮಯ್ಯ ಕುರುಬರನ್ನು ಯಾರನ್ನೂ ಬೆಳೆಸಿಲ್ಲ. ಅವರದೇನಿದ್ದರು ಅಹಿಂದ. ಅದು ದಾವಣಗೆರೆಯಿಂದ ಆಚೆಗೆ ಅಷ್ಟೇ. ಅವರು ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ಗೆದ್ದರಷ್ಟೇ ಸಿಎಂ ಆಗ್ತಾರೆ ಇಲ್ಲಿ ಬಂದರೆ ಸಿಎಂ ಆಗಲ್ಲ. ನನಗೆ ಮೋದಿ, ಬಸವರಾಜ ಬೊಮ್ಮಾಯಿ , ಮುನಿರತ್ನ, ಸುಧಾಕರ್ ಶ್ರೀರಕ್ಷೆ ಇದೆ ಸಿದ್ದರಾಮಯ್ಯ ಇಲ್ಲಿ ಥರ್ಡ್ ಪ್ಲೇಸ್ಗೆ ಹೋಗ್ತಾರೆ ಎಂದು ಕಿಡಿಕಾರಿದ್ದಾರೆ.
BIGG NEWS: 2025ರ ಜೂನ್ಗೆ 175 ಕಿಮೀ ಮೆಟ್ರೋ ಮಾರ್ಗ: ಅಂಜುಂ ಪರ್ವೇಜ್
ನಾನು ಸ್ಥಳೀಯ ಇಲ್ಲಿ ನನ್ನ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ನನಗೆ ವೋಟ್ ಹಾಕ್ತಾರೆ. ಸಿದ್ದರಾಮಯ್ಯ ಅಹಿಂದ ನಾಯಕನಲ್ಲ ಅವರು ಸಮುದಾಯಕ್ಕೂ ಏನು ಮಾಡಿಲ್ಲ. ಅವರಿಗೆ ಬುದ್ಧಿ ಹೇಳಿ ಇಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡೋಕೆ ಬರೋದು ಬೇಡ. ರಮೇಶ್ ಕುಮಾರ್ ಮತ್ತು ಟೀಂ ಸಿದ್ದರಾಮಯ್ಯಗೆ ಮಂಕು ಬೂದಿ ಎರಚಿದೆ ಅದಕ್ಕೆ ಇಲ್ಲಿಗೆ ಬರೋಕೆ ಮುಂದಾಗಿದ್ದಾರೆ. ಅವರು ಬಂದರೆ ಸೋಲು ಖಚಿತ. ಇಲ್ಲಿ ಜನಾಭಿಪ್ರಾಯ ನನ್ನ ಪರವಾಗಿದೆ. ನಾನು ಸಾಕಷ್ಟು ಅಹಿಂದ ಕೆಲಸ ಮಾಡಿದ್ದೇನೆ ನನ್ನನ್ನು ಸೋಲಿಸೋದನ್ನು ಜನ ಒಪ್ಪಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.