ಮೈಸೂರು : ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಮುಡಾ ಹಗರಣ ಸದ್ಯ ಭಾರಿ ಸದ್ದು ಮಾಡುತ್ತಿದ್ದು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂದು ಹಗರಣಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ವಿಚಾರವಾಗಿ ಅವರ ಅಭಿಮಾನಿ ಒಬ್ಬರು ಸಿದ್ದರಾಮಯ್ಯನವರಿಗೆ ಇದೀಗ ಕಂಟಕ ಎದುರಾಗಿದ್ದು ಕಂಬಳಿಯನ್ನು ಹೊದ್ದುಕೊಂಡರೆ ಅವರೆಲ್ಲ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ತಮ್ಮ ಮನದಾಳದ ಮಾತು ತಿಳಿಸಿದ್ದಾರೆ.
ಬೆಳಗಾವಿ ಮೂಲದ ಸಂತೋಷ ಎನ್ನುವ ಅಭಿಮಾನಿ ಇಂದು ಮುಖ್ಯಮಂತ್ರಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅವರಿಗೆ ಕಂಬಳಿ ಹೊಂದಿಸಲು ತೆರಳಿದ್ದರು. ಸಿದ್ದರಾಮಯ್ಯ ಸಾಹೇಬರ ಹುಟ್ಟುಹಬ್ಬ ಇದೆ ಕಂಬಳಿ ಹಾಕೋಕೆ ಹೋದಾಗ ಪೊಲೀಸರು ಯಾರು ಬಿಡಲಿಲ್ಲ. ಶಾಸಕರ ಬಳಿ ಕಂಬಳಿ ಹಾಕುತ್ತೇನೆ ಎಂದಾಗ ಬಿಟ್ಟಿದ್ದರು. ಸಾಹೇಬರು ಬೇರೆ ಟೆನ್ಶನ್ ನಲ್ಲಿದ್ದಾಗ ಬೇಡ ಸರಿಯೋ ಅಂತ ಅಂದರು ಎಂದು ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಸಂತೋಷ್ ತಿಳಿಸಿದರು.
ಸಾಹೇಬರು ನನ್ನ ಮೇಲೆ ಸಿಟ್ಟು ಮಾಡಿಕೊಂಡರು ಅವರು ಎಷ್ಟು ಕೋಪಗೊಳ್ಳುತ್ತರೆ ಅಷ್ಟು ನನಗೆ ಖುಷಿ. ಸಾಹೇಬರಿಗೆ ಕೋಪ ಬಂದ್ರೆ ನನಗೆ ಒಂದು ತರ ಖುಷಿ. ಕಂಬಳಿ ಇದ್ದಾರೆ ಯಾವುದೇ ಕಂಟಕ, ಯಾವುದೇ ಮಾಟ ಮಂತ್ರ, ಯಾವುದು ನಡೆಯಲ್ಲ ಭಂಡಾರ ಕಂಬಳಿ ಕೈಲಾಸನಿಂದ ಬಂದಂತಹ ಕಂಬಳಿ ಇದು. ಕಂಬಳಿಯನ್ನು ಬಿಸಿ ಮಳೆ ಕರೆದವರು ನಾವು. ಸಿಎಂ ಸಾಹೇಬರಿಗೆ ಕಷ್ಟ ಬಹಳ ಬರುತ್ತಿದೆ. ಇಂದು ಕಂಬಳಿ ಮುಟ್ಟಿದರು ಅಷ್ಟು ಸಾಕು ಅವರ ಕಷ್ಟ ಎಲ್ಲ ಪರಿಹಾರವಾಗುತ್ತೆ ಬೆಳಗಾವಿಯಲ್ಲಿ ಆಗಮಿಸುತ್ತಿದ್ದಾರೆ ಅಲ್ಲಿ ಕಂಬಳಿ ಕೊಟ್ಟೆ ಕೊಡುತ್ತೇನೆ ಎಂದು ಹೇಳಿದರು.
ಸಾಹೇಬರಿಗೆ ಯಾವುದೇ ರೀತಿಯಾದ ಕಷ್ಟ ಇಲ್ಲ ಎಲ್ಲಾ ಕನ್ನಡಿಗರ ಆಶೀರ್ವಾದ ಮಾಡಿದಂತಹ ಸರ್ಕಾರವಿದೆ. ಹಿಂದಿನ ಬಾಗಿಲಿನಿಂದ ಬಂದು ಮಾಡಿದ ಸರ್ಕಾರ ಅಲ್ಲ. ಬಾಂಬೆ ಹೋಟೆಲ್ ಅಲ್ಲಿದ್ದುಕೊಂಡು ಮಾಡಿದ್ದ ಸರ್ಕಾರ ಅಲ್ಲ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಹೇಗೆ ಸತ್ಯವೊ ಅಷ್ಟೇ ಸತ್ಯ ಕಂಬಳಿ ಒಡೆಯ ಸಿಎಂ ಸಿದ್ದರಾಮಯ್ಯ ಭಾರತ ದೇಶದ ಒಬ್ಬ ಮಹಾನ್ ನಾಯಕ ಎಂದು ಸಿದ್ದರಾಮಯ್ಯ ಅವರ ಅಭಿಮಾನಿ ಸಂತೋಷ ಅವರು ಹೇಳಿದರು.