ಬೆಂಗಳೂರು: ಪ್ರಧಾನಿ ಮೋದಿ ಸಮ್ಮುಖದಲ್ಲೇ ಮೆಟ್ರೋಗೆ ಕರ್ನಾಟಕದ ಪಾಲು ಎಷ್ಟು ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಲೇಮ್ ಮಾಡಿದ್ದಾರೆ. ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಕೇಂದ್ರ ಸರ್ಕಾರ 50%, ರಾಜ್ಯ ಸರ್ಕಾರ 50% ಖರ್ಚು ಮಾಡುವ ಒಪ್ಪಂದ ಆಗಿತ್ತು. ಆದರೇ ರಾಜ್ಯವೇ ಹೆಚ್ಚು ಖರ್ಚು ಮಾಡುತ್ತಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ನಮ್ಮ ಮೆಟ್ರೋ 3ನೇ ಹಂತದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ಬಳಿಕ ಬೆಂಗಳೂರಲ್ಲಿ ಮೊದಲು ಮಾತನಾಡಿದರು. ಆನಂತ್ರ ಸಿಎಂ ಸಿದ್ಧರಾಮಯ್ಯ ಮಾತನಾಡಿ, ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಶೇ.50ರಷ್ಟು ಖರ್ಚು ಮಾಡುವಂತ ಒಪ್ಪಂದ ಆಗಿದೆ. ಆದ್ರೆ ರಾಜ್ಯ ಸರ್ಕಾರವೇ ಹೆಚ್ಚು ಖರ್ಚು ಮಾಡ್ತಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ಮೋದಿ ಎದುರೇ ಕ್ರೆಡಿಟ್ ಕ್ಲೈಮ್ ಮಾಡಿದರು.
ಈಗಾಗಲೇ 96.10 ಕಿಲೋಮೀಟರ್ ಮೆಟ್ರೋ ರೈಲು ಕೆಲಸ ಮುಗಿದಿದೆ. ಇದಕ್ಕೆ ರಾಜ್ಯ ಸರ್ಕಾರ 25,387 ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸರ್ಕಾರವು 7,468.86 ಕೋಟಿ ಖರ್ಚು ಮಾಡಿದೆ. ಹಳದಿ ಮಾರ್ಗದ ನಮ್ಮ ಮೆಟ್ರೋ ರೈಲು ಯೋಜನೆಗೆ 7,160 ಕೋಟಿ ಖರ್ಚಾಗಿದೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ಮೋದಿ ಎದುರಲ್ಲೇ ಕ್ರೆಡಿಟ್ ಕ್ಲೈಮ್ ಮಾಡಿದರು.
BREAKING: ಬೆಂಗಳೂರಲ್ಲಿ ಪ್ರಧಾನಿ ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್ ಜಂಪ್ ಮಾಡಲು ಯತ್ನಿಸಿದ ಯುವಕ
BREAKING: ಮೋದಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ಲ್ಯಾನ್ ಮಾಡಿದ್ದ NSUI ಮುಖಂಡರಿಗೆ ಪೊಲೀಸರಿಂದ ಗೃಹ ಬಂಧನ