ಬೆಂಗಳೂರು, ಜನವರಿ 7: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಕಾರ್ಮಿಕ ಸಚಿವರು, ಸಿಎಂ ಆಪ್ತ ಭಂಟ ಸಂತೋಷ್ ಎಸ್ ಲಾಡ್ ಅವರು ಶುಭ ಹಾರೈಸಿದ್ದಾರೆ.
ಧೀಮಂತ ನಾಯಕ, ಬಡವರ ಭಾಗ್ಯವಿಧಾತ ಸಿದ್ದರಾಮಯ್ಯ ಅವರು, ಸಾಮಾಜಿಕ ನ್ಯಾಯದ ಹರಿಕಾರರಾಗಿ, ಅಹಿಂದ ವರ್ಗಗಳ ಮೇರು ನೇತಾರರಾಗಿ, ದಿಟ್ಟ ಆಡಳಿತಗಾರರಾಗಿ ಮಾಡುತ್ತಿರುವ ಸೇವೆ, ನಾಡು-ನುಡಿ-ಜಲ-ಗಡಿಗಳ ವಿಚಾರವಾಗಿ ಅವರ ಬದ್ಧತೆ ನಮ್ಮೆಲ್ಲರಿಗೆ ಸದಾ ಮಾರ್ಗದರ್ಶಿಯಾಗಿದೆ ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಎಂಬುದು ಅತ್ಯಂತ ಖುಷಿ ತಂದಿದೆ. ಶೋಷಿತರ ಪರವಾಗಿ, ಬಡವರು ಮತ್ತು ಕೂಲಿ ಕಾರ್ಮಿಕರ ಪರವಾಗಿ ದುಡಿಯುತ್ತಿದ್ದಾರೆ. ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿದ್ದಾರೆ. ಅವರು ನನಗೆ ತಂದೆ ಸಮಾನ. ತಾಯಿ ಚಾಮುಂಡೇಶ್ವರಿಯ ಅನುಗ್ರಹ ಅವರ ಮೇಲೆ ಸದಾ ಇರಲಿ, ಬಡವರಿಗೆ ಇನ್ನಷ್ಟು ಜನಸೇವೆ, ಸಹಾಯ ಮಾಡುವ ಶಕ್ತಿಯನ್ನು ಕೊಡಲಿ. ಆರೋಗ್ಯ, ಶಕ್ತಿಯನ್ನು ನೀಡಲಿ” ಎಂದು ಹಾರೈಸಿದ್ದಾರೆ.








