ಹಾಸನ : ಆರ್ ಎಸ್ ಎಸ್ ನಿಷೇಧದ ಕುರಿತು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಆರ್ ಎಸ್ ಎಸ್ ಇದು ಒಂದು ತಾಲಿಬಾನ್ ಸಂಘಟನೆ ಆಗಿದೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಸಿದ್ದರಾಮಯ್ಯ ಬಿಕೆ ಹರಿಪ್ರಸಾದ್ ತಾಲಿಬಾನ್ ಚೀಲಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಧಮ್, ತಾಕತ್ ಇದ್ದರೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಸೀದಿಗಳನ್ನು ತೆರವುಗೊಳಿಸಲಿ. ಆರ್ ಎಸ್ ಎಸ್ ನಿಷೇಧಿಸಲು ಕಾಂಗ್ರೆಸ್ ನವರಿಗೆ ಅಧಿಕಾರ ಇಲ್ಲ. ಆರ್ ಎಸ್ ಎಸ್ ಟಾರ್ಗೆಟ್ ಮಾಡಿ ಇವರು ಮಾತನಾಡುತ್ತಿದ್ದಾರೆ.
ಆರ್ ಎಸ್ ಎಸ್ ಶಾಖೆಯಲ್ಲಿ ದೇಶ ಪ್ರೇಮದ ಬಗ್ಗೆ ಚರ್ಚೆ ಆಗುತ್ತೆ. ಪ್ರಿಯಾಂಕ ಖರ್ಗೆ ತಾಲಿಬಾನಿಗಳ ಬಚ್ಚಾ, ಸಿಎಂ ಸಿದ್ದರಾಮಯ್ಯ ಹರಿಪ್ರಸಾದ್ ತಾಲಿಬಾನ್ ಪರ ಮಾತನಾಡುವ ಚೇಲಾಗಳು. ಪ್ರಿಯಾಂಕ ಖರ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂಬಾಲಕರಲ್ಲ. ಸೋನಿಯಾ ಗಾಂಧಿ, ನೆಹರು ಹಿಂಬಾಲಕರು ಎಂದು ವಾಗ್ದಾಳಿ ನಡೆಸಿದರು.