ಕೆಎನ್ ಎನ್ ನ್ಯೂಸ್ ಡೆಸ್ಕ್ : ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೆಕು ಅಂದ್ರೆ ಹಣ್ಣು, ಸೊಪ್ಪು, ತರಕಾರಿ ತಿನ್ನಲು ಹೇಳುತ್ತಾರೆ. ಅದರಲ್ಲು ರಕ್ತ ಸಂಚಾರ ಸರಾಗವಾಗಿ ಆಗಬೇಕು ಅಂದ್ರೆ ದಾಳಿಂಬೆ ಹಣ್ಣು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿರಲಿ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಾಳಿಂಬೆ ರಾಮಬಾಣವಾಗಿರುತ್ತದೆ.
ದಾಳಿಂಬೆಯಲ್ಲಿ ಫೈಬರ್, ವಿಟಮಿನ್ ಕೆ, ಸಿ ಮತ್ತು ಬಿ, ಕಬ್ಬಿಣ, ಪೊಟ್ಯಾಸಿಯಮ್, ಸತು ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ
ಹೀಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಈ ಹಣ್ಣನ್ನು ಎಲ್ಲರೂ ತಿನ್ನುವಂತಿಲ್ಲ. ಕೆಲವರು ಈ ಹಣ್ಣಿನಿಂದಲೂ ದೂರವಿರಬೇಕು. ತಿನ್ನುವುದನ್ನು ತಪ್ಪಿಸಬೇಕು. ಹಾಗಿದ್ದೂ ಸೇವನೆ ಮಾಡಿದರೆ, ಅನಾರೋಗ್ಯಕ್ಕೆ ತುತ್ತಾಗಲಿದ್ದೀರಿ. ಹಾಗಾದರೆ, ಯಾರು ದಾಳಿಂಬೆಯನ್ನು ಸೇವನೆ ಮಾಡಬಾರದು? ಇಲ್ಲಿದೆ ಮಾಹಿತಿ..
* ಚರ್ಮದ ಅಲರ್ಜಿ
ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ದಾಳಿಂಬೆಯನ್ನು ಸೇವಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಉಲ್ಬಣಗೊಳ್ಳಬಹುದು. ವಾಸ್ತವವಾಗಿ, ದಾಳಿಂಬೆ ಸೇವನೆಯು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.
ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು..
ಕಡಿಮೆ ರಕ್ತದೊತ್ತಡ ಇರುವವರು ದಾಳಿಂಬೆಯನ್ನು ಸೇವಿಸಬಾರದು. ಏಕೆಂದರೆ ದಾಳಿಂಬೆ ದೇಹವನ್ನು ತಣ್ಣಗಾಗಿಸುತ್ತದೆ. ಇದು ನಮ್ಮ ದೇಹದಲ್ಲಿನ ರಕ್ತ ಪರಿಚಲನೆಯ ವೇಗವನ್ನು ನಿಧಾನಗೊಳಿಸುತ್ತದೆ. ತಜ್ಞರ ಪ್ರಕಾರ, ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳುವ ಜನರು ದಾಳಿಂಬೆಯಿಂದ ದೂರವಿರುವುದೇ ವಾಸಿ.
*ಅಸಿಡಿಟಿ ಸಮಸ್ಯೆ
ಅಸಿಡಿಟಿಯಿಂದ ಬಳಲುತ್ತಿರುವವರು ದಾಳಿಂಬೆಯನ್ನು ಸೇವಿಸಬಾರದು. ದಾಳಿಂಬೆಯ ತಣ್ಣನೆಯ ಪ್ರಭಾವದಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
*ಕೆಮ್ಮಿನಿಂದ ಬಳಲುತ್ತಿರುವವರು..
ದಾಳಿಂಬೆ ದೇಹವನ್ನು ತಣ್ಣಗಾಗಿಸುತ್ತದೆ. ಹಾಗಾಗಿ ಇದನ್ನು ಇನ್ಫ್ಲುಯೆನ್ಸ್ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ಸೇವಿಸಬಾರದು. ಹಾಗಿದ್ದೂ ದಾಳಿಂಬೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.