ಕೆಎನ್ ಎನ್ ನ್ಯೂಸ್ ಡೆಸ್ಕ್: ಪ್ರತಿಯೊಬ್ಬರಿಗೂ ದೇಹದ ಆರೋಗ್ಯಕ್ಕೆ ನೀರು ಅತ್ಯಗತ್ಯವಾಗಿದೆ. ದಿನಕ್ಕೆ ಐದಾರೂ ಲೀಟರ್ ನೀರು ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ನಮ್ಮ ದೇಹ ಆಹಾರವಿಲ್ಲದೆ ಒಂದು ವಾರ ಬದುಕಬಹುದು. ಆದರೆ ನೀರು ಕುಡಿಯದೆ ಒಂದು ದಿನವೂ ಬದುಕಲು ಸಾಧ್ಯವಿಲ್ಲ.
BIGG NEWS : ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ- ಸಚಿವ ಆರ್. ಅಶೋಕ್ ಭೇಟಿ!
ನೀವು ಸಾಕಷ್ಟು ನೀರು ಕುಡಿಯದಿದ್ದರೆ, ನಿಮ್ಮ ಚರ್ಮವು ನಿರ್ಜೀವ ಮತ್ತು ಶುಷ್ಕವಾಗಿರುತ್ತದೆ. ಅಷ್ಟೇ ಅಲ್ಲ, ಕಿಡ್ನಿಯಲ್ಲಿ ಕಲ್ಲುಗಳಾಗುವ ಅಪಾಯವೂ ಇದೆ. ಆದ್ದರಿಂದಲೇ ನೀರು ಕುಡಿದಷ್ಟೂ ಆರೋಗ್ಯವಂತರಾಗಿರುತ್ತೀರಿ ಎನ್ನುತ್ತಾರೆ ತಜ್ಞರು.
ಆದರೆ, ಊಟದ ನಡುವೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ತಿನ್ನುವ ಸಮಯದಲ್ಲಿ ಯಾವ ಸಂದರ್ಭಗಳಲ್ಲಿ ನೀರು ಕುಡಿಯಬೇಕು? ಊಟಕ್ಕಿಂತ ಮುಂಚೆ ಕುಡಿಯಬೇಕಾ ಅಥವಾ ನಂತರವಾ? ಇದರಿಂದ ಪರಿಣಾಮ ಏನಾಗುತ್ತದೆ ತಿಳಿದುಕೊಳ್ಳಣ .
BIGG NEWS : ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ- ಸಚಿವ ಆರ್. ಅಶೋಕ್ ಭೇಟಿ!
ಊಟದ ನಡುವೆ ನೀರು ಕುಡಿದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ ಎಂದು ಕೇಳಿದ್ದೇವೆ. ಇದರೊಂದಿಗೆ ವಿಷಜಂತುಗಳು ಶೇಖರಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ನಮ್ಮ ಆಯುರ್ವೇದವೂ ಊಟದ ನಡುವೆ ನೀರು ಕುಡಿಯಬಾರದು ಎಂದು ಹೇಳುತ್ತದೆ. ಊಟದೊಂದಿಗೆ ನೀರು ಕುಡಿಯುವುದರಿಂದ ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತದೆ. ಇದು ಆಹಾರದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಕೆಲವೊಮ್ಮೆ ನಾವು ತಿನ್ನುವ ಆಹಾರವೂ ನಮಗೆ ಹೆಚ್ಚು ಬಾಯಾರಿಕೆಯನ್ನುಂಟು ಮಾಡುತ್ತದೆ. ಫೈಬರ್ ನೈಸರ್ಗಿಕವಾಗಿ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ. ಸಲಾಡ್ ತಿಂದ ನಂತರ ಹೆಚ್ಚು ಬಾಯಾರಿಕೆಯಾಗುತ್ತದೆ. ಪ್ರೋಟೀನ್ ಭರಿತ ಆಹಾರ ತಿನ್ನುವ ನಡುವೆ ನೀರು ಕುಡಿಯದಿರುವುದೇ ಉತ್ತಮ.
ಯಾವಾಗ ನೀರು ಕುಡಿಯಬೇಕು?
*ಬೆಳಗ್ಗೆ ಎದ್ದ ತಕ್ಷಣ ಕನಿಷ್ಠ ಒಂದು ಲೋಟ ನೀರು ಕುಡಿಯುವುದು ಉತ್ತಮ. ಇದು ದೇಹದ ಆಂತರಿಕ ಅಂಗಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
*ಸ್ನಾನದ ಮೊದಲು ಒಂದು ಲೋಟ ನೀರು ಕುಡಿಯುವುದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವರು ಬಿಸಿನೀರಿನ ಸ್ನಾನದ ನಂತರ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.
BIGG NEWS : ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ- ಸಚಿವ ಆರ್. ಅಶೋಕ್ ಭೇಟಿ!
*ಜೀರ್ಣಕ್ರಿಯೆಗೆ ಸಹಾಯ ಮಾಡಲು ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯಿರಿ. ಊಟದ ಮೊದಲು ಅಥವಾ ನಂತರ ತಕ್ಷಣ ಹೆಚ್ಚು ನೀರು ಕುಡಿಯಬೇಡಿ. ಏಕೆಂದರೆ ನೀರು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸುತ್ತದೆ. ತಿಂದ ಒಂದು ಗಂಟೆಯ ನಂತರ ನೀರು ಕುಡಿಯುವುದರಿಂದ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತಿಂದ ತಕ್ಷಣ ಕರುಳಿನಲ್ಲಿ ಅಂಟಿಕೊಂಡಿರುವ ಆಹಾರ ಕೆಳ ಹೋಗಲು ಗುಟುಕು ನೀರು ಕುಡಿದರೆ ಸಾಕು.