ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಕೆಲ ನಾಯಕರು ಯುದ್ಧ ಆದರೆ ನಷ್ಟವಾಗುತ್ತದೆ ಅಂತಾರೆ. ದೇಶಕ್ಕೆ ನಷ್ಟವಾಗುತ್ತೆ ಅಂತ ನಾವು ಉಗ್ರರಿಂದ ಹೊಡೆಸಿಕೊಳ್ಳಬೇಕಾ? ನಮಗೆಲ್ಲ ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ. ಆದಷ್ಟು ಬೇಗ ಯುದ್ಧ ಘೋಷಣೆ ಮಾಡಬೇಕು ಎಂದು ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶ ಹಾಗು ವಿದೇಶಗಳು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿವೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದಾರೆ. ಪಾಕಿಸ್ತಾನದವರಿಗೆ ಕೇವಲ ಬುದ್ಧಿ ಮಾತಲ್ಲ ತಕ್ಕ ಶಾಸ್ತಿ ಮಾಡಬೇಕು. ರಕ್ಷಣಾ ಸಚಿವರು ಮೂರು ಸೇನಾ ಪಡೆಗಳ ಜೊತೆಗೆ ಸಭೆ ನಡೆಸಿದ್ದಾರೆ.
ಯಾರಿಗೆ ಹೊಡಿಬೇಕು ಅವರನ್ನು ಹೊಡೆಯಿರಿ ಎಂದು ಹೇಳಿದ್ದಾರೆ. ನಮ್ಮ ಯೋಧರು ಪಾಕಿಸ್ತಾನವನ್ನು ಭೂಪಟದಿಂದ ಅಳಿಸಿ ಹಾಕುತ್ತಾರೆ ಎಂದರು. ಕಾಂಗ್ರೆಸ್ಸಿನ ಕೆಲ ನಾಯಕರು ಯುದ್ಧ ಆದರೆ ನಷ್ಟವಾಗುತ್ತದೆ ಅಂತಾರೆ. ದೇಶಕ್ಕೆ ನಷ್ಟವಾಗುತ್ತೆ ಅಂತ ನಾವು ಉಗ್ರರಿಂದ ಹೊಡೆಸಿಕೊಳ್ಳಬೇಕಾ? ನಮಗೆಲ್ಲ ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ. ಆದಷ್ಟು ಬೇಗ ಯುದ್ಧ ಘೋಷಣೆ ಮಾಡಬೇಕು ಎಂದು ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಆ ರೀತಿ ಏಕೆ ಹೇಳಿಕೆ ಕೊಟ್ಟರು ಗೊತ್ತಿಲ್ಲ. ಪಾಕಿಸ್ತಾನದ ಮೇಲೆ ಯುದ್ಧದ ಅವಶ್ಯಕತೆ ಇಲ್ಲ ಅಂತ ಮೊದಲು ಹೇಳಿ ಸಾಕಷ್ಟು ಟೀಕೆಗಳು ಬಂದಾದ ಮೇಲೆ ಯುದ್ಧ ಮಾಡಿ ಅಂತ ಹೇಳುತ್ತಾರೆ. ದೇಶದ ಪ್ರಶ್ನೆ ಬಂದಾಗ ಯಾವುದೇ ಪಕ್ಷ ಹಾಗೂ ಜಾತಿ ಬರುವುದಿಲ್ಲ. ಯಾರೇ ದೇಶದ್ರೋಹದ ಕೆಲಸ ಮಾಡಿದರೆ ಅವರನ್ನು ಬಗ್ಗು ಬಡಿಯಬೇಕು. ಕೆಲವು ಸಚಿವರು ಯೋಧರ ಶಕ್ತಿಯನ್ನು ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಒಬ್ಬ ಅಬಕಾರಿ ಸಚಿವ ಇದ್ದಾನೆ ಅವನಿಗೆ ಲಂಗು ಲಗಾಮು ಇಲ್ಲ ಎಂದು ಕಿಡಿ ಕಾರಿದರು.