ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇದೀಗ ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳು ಎದುರಾಗುತ್ತದೆ. ಚಳಿಗಾಲದಲ್ಲಿ ಸೌಂದರ್ಯದ ಆರೈಕೆ ಮಾಡಿಕೊಳ್ಳುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಅಂದದ ತುಟಿಗಳನ್ನು ದಿನನಿತ್ಯ ಆರೈಕೆಯ ಅಗತ್ಯವಿರುತ್ತದೆ. ಹಾಗಾದರೆ ಒಡೆದ ತುಟಿಗಳು ಸರಿಪಡಿಸಿಕೊಳ್ಳಲು ಏನು ಮಾಡಬಹುದು ಎನ್ನುವ ಟಿಪ್ಸ್ ಇಲ್ಲಿದೆ ನೋಡಿ.
ಸೂರ್ಯಗ್ರಹಣ ಎಫೆಕ್ಟ್ : ನಾಳೆ ‘ಚಾಮುಂಡಿ ಬೆಟ್ಟ’ಕ್ಕೆ ಭಕ್ತರ ಪ್ರವೇಶ ನಿರ್ಬಂಧ |Chamundi Hills
ಅಲೋವೆರಾ
ತುಟಿಗಳ ಆರೋಗ್ಯ ಕಾಪಾಡಿಕೊಳ್ಳಲು ಅಲೋವೆರಾ ಜೆಲ್ ಅತ್ಯುತ್ತಮ ಮನೆಮದ್ದಾಗಿದೆ. ಆದಷ್ಟು ತಾಜಾ ಅಲೋವೆರಾ ಬಳಕೆ ಮಾಡಿದರೆ ಒಳ್ಳೆಯದು. ಅಲೋವೆರಾವನ್ನು ಒಡೆದ ತುಟಿಗಳ ಮೇಲೆ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ. ಅಲ್ಲದೆ ತುಟಿ ಒಡೆದಿರುವುದು ಸರಿಯಾಗುತ್ತದೆ.
ಕೊಬ್ಬರಿ ಎಣ್ಣೆ
ತ್ವಚೆಯ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಕೊಬ್ಬರಿ ಎಣ್ಣೆ ಅತ್ಯುತ್ತಮ ಮೂಲವಾಗಿದೆ. ಇದು ತುಟಿಯ ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹೀಗಾಗಿ ಚಳಿಗಾಲದಲ್ಲಿ ತುಟಿ ಚೆನ್ನಾಗಿರಲು ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ತುಟಿಗೆ ಸವರಿಕೊಂಡು ಮಲಗಿ. ಇದರಿಂದ ಒಣಗುವ ಸಮಸ್ಯೆ ನಿವಾರಣೆಯಾಗುವುದು.
ಸೂರ್ಯಗ್ರಹಣ ಎಫೆಕ್ಟ್ : ನಾಳೆ ‘ಚಾಮುಂಡಿ ಬೆಟ್ಟ’ಕ್ಕೆ ಭಕ್ತರ ಪ್ರವೇಶ ನಿರ್ಬಂಧ |Chamundi Hills
ಸಕ್ಕರೆ
ಒಡೆದ ತುಟಿ, ಒಣ ಚರ್ಮದ ತುಟಿಯ ಸಮಸ್ಯೆಗಳಿಗೆ ಸಕ್ಕರೆ ಉತ್ತಮ ಮದ್ದಾಗಿದೆ. ಸಕ್ಕರೆಯನ್ನು ತುಟಿಗೆ ಹಚ್ಚಿಕೊಂಡು ಒಂದೈದು ನಿಮಿಷ ಹಾಗೆಯೇ ಬಿಡಿ. ನಂತರ ನಿಧಾನವಾಗಿ ಉಜ್ಜಿಕೊಳ್ಳಿ.ಇದರಿಂದ ತುಟಿಯ ಮೇಲಿನ ಒಣ ಚರ್ಮ ಕಿತ್ತು ಬರುತ್ತದೆ. ನಂತರ ತೊಳೆದುಕೊಂಡು ಕೊಬ್ಬರಿ ಎಣ್ಣೆ ಅಥವಾ ಅಲೋವೆರಾ ಜೆಲ್ಲ ಹಚ್ಚಿ. ಇದರಿಂದ ತುಟಿಗೆ ನೈಸರ್ಗಿಕ ಸ್ಕೃಬ್ ಆದಂತಾಗುತ್ತದೆ.
ಹಾಲಿನ ಕೆನೆ
ಚರ್ಮಕ್ಕೆ ಉತ್ತಮ ಮೃದುತ್ವವನ್ನು ಹಾಲಿನ ಕೆನೆ ನೀಡುತ್ತದೆ. ಹೀಗಾಗಿ ನಿಮ್ಮ ತುಟಿ ಒಡೆಯುವ ಸಮಸ್ಯೆಗೂ ಕೂಡ ಇದು ಪರಿಹಾರವಾಗುತ್ತದೆ. ರಾತ್ರಿ ಮಲಗುವಾಗ ತುಟಿಗೆ ಹಾಲಿನ ಕೆನೆಯನ್ನು ಹಚ್ಚಿ ಒಂದೆರಡು ಸೆಕೆಂಡ್ ಮಸಾಜ್ ಮಾಡಿ. ಇದರಿಂದ ಕೆನೆಯಲ್ಲಿ ಎಣ್ಣೆಯ ಅಂಶ ತುಟಿಗೆ ಹೀರಿಕೊಂಡು ಶುಷ್ಕತೆಯನ್ನು ನಿವಾರಿಸುತ್ತದೆ.
ಸೂರ್ಯಗ್ರಹಣ ಎಫೆಕ್ಟ್ : ನಾಳೆ ‘ಚಾಮುಂಡಿ ಬೆಟ್ಟ’ಕ್ಕೆ ಭಕ್ತರ ಪ್ರವೇಶ ನಿರ್ಬಂಧ |Chamundi Hills
ಹೆಚ್ಚು ನೀರನ್ನು ಕುಡಿಯಿರಿ
ದೇಹದ ನಿರ್ಜಲೀಕರಣದಿಂದಲೂ ಕೂಡ ತುಟಿ ಒಣಗುತ್ತದೆ ಜೊತೆಗೆ ತುಟಿಯ ಚರ್ಮದ ಸಿಪ್ಪೆ ಸುಲಿಯುತ್ತದೆ. ನೀರನ್ನು ಕುಡಿಯುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಮುಖ್ಯವಾದ ಸಂಗತಿಯೆಂದರೆ ನೀರು ಕುಡಯಯುವಾಗ ಬಾಟಲಿ ಅಥವಾ ಲೋಟವನ್ನು ಬಾಯಿಗೆ ಕಚ್ಚಿ ಅಂದರೆ ತುಟಿಗೆ ನೀರು ತಾಗುವ ಹಾಗೆ ಮಾಡಿ ಕುಡಿಯಿರಿ. ಇದರಿಂದ ತುಟಿ ಒಡೆಯುವ ಸಮಸ್ಯೆ ನಿವಾರಣೆಯಾಗುತ್ತದೆ
ಸೂರ್ಯಗ್ರಹಣ ಎಫೆಕ್ಟ್ : ನಾಳೆ ‘ಚಾಮುಂಡಿ ಬೆಟ್ಟ’ಕ್ಕೆ ಭಕ್ತರ ಪ್ರವೇಶ ನಿರ್ಬಂಧ |Chamundi Hills