ಕೆಎನ್ ಎನ್ ನ್ಯೂಸ್ ಡೆಸ್ಕ್ : ಮದುವೆಯಾದ ಹೆಣ್ಮುಕ್ಕಳಿಗೆ ಅತ್ತೆ, ಮಾವ, ಗಂಡ ಚಿಕ್ಕ ಪ್ರಪಂಚವಾಗಿರುತ್ತದೆ. ಆದರೆ ಒಂದೇ ಮನೆಯಲ್ಲಿ ಇದ್ದಾಗ ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ.
ಅದರಲ್ಲೂ ಮುಖವಾಗಿ ಅತ್ತೆ- ಸೊಸೆ ನಡುವೆ ಕಿರಿಕಿರಿ ಆಯ್ತು ಅಂದರೆ ಜೀವನನೇ ಬೇಸರ ಅನಿಸಿಬಿಡುತ್ತದೆ. ಅತ್ತೆ-ಸೊಸೆ ನಡುವೆ ಸ್ವಲ್ಪ ಬಿರುಕು ಮೂಡಿದರೂ ದೀರ್ಘಕಾಲ ಮನಸ್ಸಿನಲ್ಲಿ ದ್ವೇಷ ಉಳಿದುಹೋಗಿ ಪ್ರತಿದಿನ ಜಗಳವಾಗುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ. ಅತ್ತೆಯಾದವರು ತಾಯಿಯಂತೆ ಸೊಸೆಯ ಜೊತೆ ಹೇಗಿರಬೇಕು ಹಾಗೂ ಸೊಸೆಯಾದವರು ಅತ್ತೆ ಜೊತೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ
* ಅತ್ತೆ-ಸೊಸೆ ಜಗಳದಲ್ಲಿ ಪುರುಷರ ತಲೆ ಹಾಳಾಗುತ್ತದೆ. ಹೆಂಡತಿ ಮತ್ತು ತಾಯಿಯಿಂದ ಬರುವ ಒತ್ತಡದಿಂದಾಗಿ ಪುರುಷರು ರೋಸತ್ತು ಹೋಗುತ್ತಾರೆ.
* ಒರಟಾದ ಅತ್ತೆಯನ್ನು ಮೃದುವಾಗಿ ಮಾತನಾಡಿಸುವ ಕಲೆ ಸೊಸೆಗೆ ಇರಬೇಕು. ಹಾಗೆಯೇ ಸೊಸೆ ತುಂಬಾ ಜೋರಿದ್ದರೆ ಆಕೆಯನ್ನು ಅತ್ತೆ ಪ್ರೀತಿಯಿಂದ ಸರಿಪಡಿಸಬೇಕು.
* ಗಂಡ-ಹೆಂಡತಿ-ಮಕ್ಕಳು ಶಾಪಿಂಗ್ಗೆ ಹೋದಾಗ ಸೊಸೆಯಾದವರು ಅತ್ತೆಗಾಗಿಯೂ ಏನಾದರೂ ತರಬೇಕು. ಅತ್ತೆಯೂ ಕೂಡ ಸೊಸೆ ನೀಡುವ ವಸ್ತುಗಳನ್ನು ಸಂತೋಷದಿಂದ ಸ್ವೀಕರಿಸಬೇಕು.
* ಅತ್ತೆ ಮಾಡುವ ಅಡುಗೆ ಸೊಸೆಗೆ, ಸೊಸೆ ಮಾಡುವ ಅಡುಗೆ ಅತ್ತೆಗೆ ಇಷ್ಟವಾಗದೇ ಇರಬಹುದು. ಆದರೆ ಈ ಬಗ್ಗೆ ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ಇರಬಾರದು.
* ಸೊಸೆಯಾದವರು ನಿಮ್ಮ ಪತಿಯೊಂದಿಗೆ ಅತ್ತೆಯ ಬಗ್ಗೆ ದೂರುಗಳನ್ನು ಹೇಳಬಾರದು. ಅತ್ತೆಯಾದವರೂ ಅಷ್ಟೇ ಸೊಸೆಯ ಬಗ್ಗೆ ಮಗನ ಬಳಿ ದೂರು ಹೇಳಬಾರದು.