ಬೆಂಗಳೂರು : ಸಂಸತ್ ನಲ್ಲಿ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದನ್ನು ವಿರೋಧಿಸಿ, ಬಿಜೆಪಿ ನಾಯಕರು ರಾಹುಲ್ ಗಾಂಧಿ ಕ್ಷಮೆಗೆ ಆಗಮಿಸಿದ್ದಾರೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ಹೇಳಿದ್ದನ್ನೆಲ್ಲ ಹಿಂದುಗಳು ಕೇಳಬೇಕಾ ಎಂದು ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಬಿಜೆಪಿಗೆ ಇದೇ ಚಾಳಿ. ಹಿಂದೂಗಳಿಂದ ಹಿಂಸಾಚಾರ ನಡೆಯಲು ಬಿಡಲ್ಲ ಅಂತ ಹೇಳಿದ್ದಾರೆ. ಅಹಮ್ಮದಾಬಾದ್‌ನಲ್ಲಿ ಹತ್ಯೆಯಾಗಿದೆಯಲ್ಲ ಇದಕ್ಕೆ ಏನ್ ಹೇಳ್ತಾರೆ? ಎಂದು ಸಂಸತ್‌ನಲ್ಲಿ ರಾಹುಲ್ ಗಾಂಧಿ ಆಡಿದ ಮಾತುಗಳಿಗೆ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ತಿರುಗೇಟು ನೀಡಿದರು.
ಹತ್ತುವರ್ಷಗಳಿಂದ ಇದೇ ಕೆಲಸವನ್ನ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಅಲ್ವ ಇವರಿಗೆ ಲೋಕಸಭೆಯಲ್ಲಿ ಬಹುಮತ ಬಂದಿಲ್ಲ. ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ. ಬಿಜೆಪಿ ಐಟಿ ಸೆಲ್ ಸುಳ್ಳಿನಕಾರ್ಖಾನೆ ತಯಾರು ಮಾಡುತ್ತೆ. ರಾಹುಲ್ ಗಾಂಧಿ ಕೊಟ್ಟಿರುವ ಹಿಂದೂ ವಿರೋಧಿ ಸ್ಟೇಟ್‌ಮೆಂಟ್ ತೋರಿಸಲಿ ಎಂದು ಸವಾಲು ಹಾಕಿದರು.
ಮೋದಿ ಹೇಳಿದನ್ನೆಲ್ಲಾ ಹಿಂದೂಗಳು ಕೇಳಬೇಕಾ? ಹಿಂದಿನಿಂದಲೂ ಹಿಂದೂ ಧರ್ಮ ಉಳಿದಿಲ್ವಾ? ಬೆಳೆದಿಲ್ವಾ? ಇವರೆಲ್ಲಾ ಆರ್‌ಎಸ್‌ಎಸ್ ಶಾಖೆಗಳಿಗೆ, ಗೋಸಂರಕ್ಷಣೆಗೆ ಕಳಿಸಿ ಬೆಳೆಸ್ತಿದ್ದಾರಾ? ಮಣಿಪುರ ವಿಚಾರ, ನೀಟ್ ಸ್ಕ್ಯಾಮ್, ಪ್ರಜ್ವಲ್, ಸೂರಜ್ ಪ್ರಕರಣಗಳ ಬಗ್ಗೆ ಯಾಕೆ ಮಾತನಾಡ್ತಿಲ್ಲ? ಹೀಗಾಗಿ ಅದನ್ನ ಮರೆಮಾಚಲು ಈ ರೀತಿ ತಂದಿಡುವುದು. ಸಂಸತ್‌ನಲ್ಲಿ ರಾಹುಲ್ ಗಾಂಧಿ ಮಾತು ರೆಕಾರ್ಡ್ ಆಗಿದೆಯಲ್ವ? ಮೋದಿ ಮಂಗಳವಾರ ಎರಡೂವರೆ ತಾಸು ಭಾಷಣ ಮಾಡಿದ್ದಾರೆ. ನಿರುದ್ಯೋಗ, ಆರ್ಥಿಕ ಅಸಮಾನತೆ, ಸಂವಿಧಾನ ರಕ್ಷಣೆ ಇದರ ಬಗ್ಗೆ ಮಾತನಾಡಿದ್ದಾರಾ?