ಬೆಂಗಳೂರು : ಅರಣ್ಯ ಇಲಾಖೆಯಲ್ಲಿ ಪಶು ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ ಪಶು ವೈದ್ಯರ ನೇಮಕಕ್ಕೆ ರೂಪರೆಷೆ ಸಿದ್ಧಪಡಿಸಲು ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ACS ಗೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ವಿವಿಧ ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ಮತ್ತು ವನ್ಯಜೀವಿ ಪುನರ್ವಸತಿ ಕೇಂದ್ರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ಇದೆ.
ಪಶು ವೈದ್ಯರನ್ನು ನಿಯೋಜನೆ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಈಗಾಗಲೇ ಅರಣ್ಯ ಇಲಾಖೆಗೆ ಪ್ರತಿಭ ಈಶ್ವರ ಕಂಡ್ರೆ ಸೂಚನೆ ನೀಡಿದ್ದಾರೆ ಸಕ್ಕರೆ ಬೈಲುಕಿ ಬರದಲ್ಲಿ ಕಾಯಿಲೆಯಿಂದ ನಾಲ್ಕು ಆನೆಗಳು ನರಳುತ್ತಿವೆ ಬಾಲಣ್ಣ ಎಂಬ ಹಣೆಗೆ ಸೋಂಕು ಹಿನ್ನೆಲೆಯಲ್ಲಿ ವೈದ್ಯರು ಆನೆಯ ಕಿವಿಯನ್ನು ತೆಗೆದಿದ್ದಾರೆ.
ಅಲ್ಲದೇ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಬಾಲಣ್ಣ ಎಂಬ ಆನೆ ಪಾಲ್ಗೊಂಡಿತ್ತು. ಕಾರ್ಯಾಚರಣೆ ವೇಳೆ ಅರವಳಿಕೆ ಚುಚ್ಚು ಮದ್ದು ನೀಡಲು ವೈದ್ಯರ ಕೊರತೆ ಉಂಟಾಗಿದೆ ಹೀಗಾಗಿ ಪ್ರತ್ಯೇಕ ಕೇಡರ ರೂಪಿಸಿ ವನ್ಯಜೀವಿ ವೈದ್ಯರ ನೇಮಕ ಅಗತ್ಯವಾಗಿದೆ. ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರತ್ಯೇಕ ಕಿಡರ ಜೊತೆಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಎಸಿಎಸ್‌ಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.








