ಬೆಂಗಳೂರು : ನಗರದ ಕೋಡಿಗೆಹಳ್ಳಿಯಲ್ಲಿಯ ದೇವಿನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ದೇವಿನಗರ ಜ್ಯುವೆಲರಿ ಶಾಪ್ಗೆ ದರೋಡೆಕೋರರು ನುಗ್ಗಿ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ .ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ vs ಡಿ.ಕೆ.ಸುರೇಶ್ ಅಂದರೆ ನಿಸ್ವಾರ್ಥ v/s ಸ್ವಾರ್ಥ, ಸೇವೆ v/s ಸುಲಿಗೆ- HDK
ಘಟನಾ ಸ್ಥಳಕ್ಕೆ ರಾಜ್ಯ ಡಿಜಿ-ಐಜಿಪಿ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಬಿ. ದಯಾನಂದ ಪ್ರತಿಕ್ರಿಯಿಸಿ ಬೆಳಗ್ಗೆ 11 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಆಗಮಿಸಿದ್ದಾರೆ. ಆರೋಪಿಗಳು ದರೋಡೆಗೆ ಬಂದ ಹಾಗೇ ಕಾಣುತ್ತಿದೆ. ಒಟ್ಟು ಇಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ. ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ದೇವಿನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಮಾಲೀಕರಾದ ಅಪೂರಾಮ್ ಹಾಗೂ ಅಂದರಾಮ್ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ನಾಲ್ವರು ಮುಖ ಕಾಣದಂತೆ ಬಟ್ಟೆ ಸುತ್ತಿಕೊಂಡು ಹೆಲ್ಮೆಟ್ ಧರಿಸಿಕೊಂಡು ಶಾಪ್ಗೆ ಎಂಟ್ರಿಯಾಗಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್: ಪಿಯು ಮಂಡಳಿ ನೀಡಿದೆ ಈ ಸ್ಪಷ್ಟನೆ!
ದರೋಡೆಕೋರರ ಬಳಿಯಿದ್ದ ಎರಡು ಪಿಸ್ತೂಲ್ಗಳನ್ನು ತೋರಿಸಿ ಚಿನ್ನ ದೋಚಲು ಯತ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಓರ್ವನ ಕಾಲಿಗೆ ಶೂಟ್ ಮಾಡಿದರೆ, ಮತ್ತೊಬ್ಬರ ಹೊಟ್ಟೆಗೆ ಫೈರ್ ಮಾಡಿ ಎಸ್ಕೇಪ್ ಆಗಿದ್ದಾರೆ. ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ರವಾನಿಸಲಾಗಿದೆ.