ಚಿತ್ರದುರ್ಗ: ಮುರುಘಾ ಮಠದಲ್ಲಿ ಶಾಂತವೀರ ಮುರುಘಾಶ್ರೀ ಚಿತ್ರಪಟ ಹಾಗೂ ಪಾದುಕೆಯ ಶೂನ್ಯಪೀಠಾರೋಹಣ ಇಂದು ನೆರವೇರಿತು.
ಪೊಕ್ಸೊ ಪ್ರಕರಣದಲ್ಲಿ ಜೈಲಾಪಾಗಿರುವ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಹಿನ್ನೆಲೆಯಲ್ಲಿ ಈ ಬಾರಿ ಧಾರ್ಮಿಕ ವಿಧಿಗಳನ್ನು ಸರಳವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಮಾಜಿ ಶಾಸಕ ಹಾಗೂ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ದಂಪತಿ ಸಹ ಮಠಕ್ಕೆ ಆಗಮಿಸಿದ್ದರು.
ಶಿವಮೂರ್ತಿ ಮುರುಘಾ ಶರಣರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಸವರಾಜನ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತಡೆದರು. ಈ ವೇಳೆ ಕೆಲ ಸಮಯ ವಾಗ್ವಾದ ನಡೆಯಿತು. ಶೂನ್ಯಪೀಠಕ್ಕೆ ನಮನ ಸಲ್ಲಿಸಿದ ಬಳಿಕ ಬಸವರಾಜನ್ ಅವರು ಮೆರವಣಿಗೆಯಲ್ಲಿಯೂ ಭಾಗಿಯಾಗಿದ್ದರು.