ಮಂಗಳೂರು : ಇತ್ತೀಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಯೋ ವೃದ್ಧರೆನ್ನದೇ ಹೃದಯಘಾತ, ಹೃದಯ ಸ್ತಂಭದಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಆಟವಾಡುತ್ತಲೇ ಯುವಕನೋರ್ವ ಹೃದಯಘಾತಕ್ಕೀಡಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹೌದು ಮೃತ ಯುವಕನನ್ನು ಅತ್ತಾವರ್ ಐವರಿ ಟವರ್ ನಿವಾಸಿಯಾಗಿದ್ದ ಶರೀಫ್ ಅವರ ಪುತ್ರ ಶಹೀಮ್ (20) ಮೃತ ಯುವಕ ಎಂದು ತಿಳಿದುಬಂದಿದ್ದು, ಈತ ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶಹೀಮ್ ಗೆಳೆಯರೊಂದಿಗೆ ಬುಧವಾರ ಶಟ್ಲ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದರು ಎಂಗು ಹೇಳಲಾಗಿದ್ದು, ಈ ವೇಳೆ ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು.