ಹರಿದ್ವಾರ : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಒಂದು ರೀಲ್ಸ್ ಮಾಡುವ ಟ್ರೆಂಡ್ ಹೆಚ್ಚಾಗಿ ಬಿಟ್ಟಿದೆ. ಅದರಲ್ಲೂ ಯುವ ಜನತೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಸಹ ಕೂಡ ಅಪಾಯದ ಸ್ಥಳಗಳಲ್ಲಿ ಹೋಗಿ ರೀಲ್ಸ್ ಮಾಡಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ಹರಿದ್ವಾರದಲ್ಲಿ ಇಂತಹದ್ದೇ ಘಟನೆ ನಡೆದಿದ್ದು ಹರಿದ್ವಾರದ ಮಾನಸಾ ದೇವಿ ಹಿಲ್ಸ್ನಲ್ಲಿ ಇಂದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತಿದ್ದು, ಕಾಲು ಜಾರಿ 70 ಮೀಟರ್ ಆಳದ ಕಂದಕಕ್ಕೆ ಬಿದ್ದ ದಾರುಣ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ಯುವತಿಯನ್ನು ಮುಜಾಫರ್ನಗರ ನಿವಾಸಿ 28 ವರ್ಷದ ರೇಶು ಎಂದು ಗುರುತಿಸಲಾಗಿದ್ದು, ಪೂಜ್ಯ ಮಾನಸಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ತನ್ನ ಕುಟುಂಬದೊಂದಿಗೆ ಹರಿದ್ವಾರಕ್ಕೆ ಬಂದಿದ್ದಳು. ಆಗ ಮೊಬೈಲ್ನಲ್ಲಿ ರೀಲ್ಸ್ ರೆಕಾರ್ಡ್ ಮಾಡುವಾಗ ಆಳವಾದ ಕಂದಕಕ್ಕೆ ಬಿದ್ದಿದ್ದಾಳೆ. ತಕ್ಷಣ ಅಲ್ಲಿದ್ದ ಪ್ರವಾಸಿಗರು ಆಕೆಯನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.