ಮಧ್ಯಪ್ರದೇಶ : ಇತ್ತೀಚಿಗೆ ಈ ಹೃದಯಾಘಾತ ಎನ್ನುವುದು ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ, ವಯೋ ವೃದ್ಧರು ಸಹ ಈ ಒಂದು ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದಲ್ಲಿ ಕೂಡ ಅಂದೆ ಘಟನೆ ನಡೆದಿದ್ದು, ಸಹೋದರಿಯ ಮದುವೆಯಲ್ಲಿ ವೇದಿಕೆ ಮೇಲೆ ಕುಣಿಯುತ್ತಲೇ ಕುಸಿದು ಬಿದ್ದು ಹಾರ್ಟ್ ಅಟ್ಯಾಕ್ ಆಗಿ ಯುವತಿ ಸಾವನಪ್ಪಿದ್ದಾಳೆ.
ಹೌದು ಸಹೋದರಿಯ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುವಾಗಲೇ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಎಂಬಲ್ಲಿ ನಡೆದಿದೆ.ಅಂದಾಜು 25 ವರ್ಷದ ಯುವತಿಯು, ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತವಾಗಿದೆ.
ಈ ವೇಳೆ ವೇದಿಕೆ ಮೇಲೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿದ್ದ ಸಂಬಂಧಿಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಯುವತಿ ಡ್ಯಾನ್ಸ್ ಮಾಡುತ್ತಲೇ ಸಾವನ್ನಪ್ಪಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
డాన్స్ చేస్తూ కుప్పకూలి యువతి మృతి
మధ్యప్రదేశ్ – విదిషలో తన సోదరి పెళ్లి వేడుకల్లో స్టేజీపై డాన్స్ చేస్తూ ఒక్కసారిగా కుప్పకూలిన యువతి
అక్కడే ఉన్న బంధువులు ఆమెను ఆస్పత్రికి తరలించగా, అప్పటికే చనిపోయినట్లు నిర్ధారించిన వైద్యులు pic.twitter.com/y2Y5Z74qYJ
— Telugu Scribe (@TeluguScribe) February 9, 2025