ಕೊಪ್ಪಳ : ಸಮಾಜದಲ್ಲಿ ಎಂತೆಂತ ವಿಕೃತ ಮನಸ್ಸು ಇರೋರು ಇರ್ತಾರೆ ಅಂದರೆ ಇದೀಗ ಮನೆಯ ಗೋಡೆ ಹಾರಿ ವಿಕೃತ ಕಾಮಿಯೊಬ್ಬ ಮಹಿಳೆಯರ ಒಳಉಡುಪನ್ನು ಕಳ್ಳತನ ಮಾಡಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರತಿಷ್ಠಿತ ಏರಿಯಾದಲ್ಲಿ ಮಹಿಳೆಯರ ಒಳಉಡಪು ಕಳ್ಳತನ ಮಾಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮನೆಯ ಗೋಡೆ ಹಾರಿ ವಿಕೃತ ಕಾಮಿ ಮಹಿಳೆಯರ ಒಳ ಉಡುಪು ಕಳ್ಳತನ ಮಾಡಿದ್ದಾನೆ. ಮಹಿಳೆಯರ ಒಳಉಡುಪು ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಂಗವಾತಿಯ ಸಿಬಿಎಸ್ ಬಡಾವಣೆಯ ಸುತ್ತಮುತ್ತ ಮಹಿಳೆಯರ ಒಳ ಉಡುಪು ಕಳ್ಳತನವಾಗಿದೆ. ಇದರಿಂದಾಗಿ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








