ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರರ್ ಡಾಕ್ಟರ್ ಮಲ್ಲು ಅರೆಸ್ಟ್ ಆಗಿದ್ದಾರೆ. ಗಾಂಧಿ ನಗರದಲ್ಲಿರುವ ನರಸಿಂಹ ಕೌನ್ಸಿಲ್ ಕಚೇರಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುವ ಘಟನೆ ನಡೆದಿತ್ತು.
ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಮಹಿಳಾ ಸಿಬ್ಬಂದಿ ಜೊತೆಗೆ ಆರೋಪಿ ಡಾಕ್ಟರ್ ಮಲ್ಲು ಅಸಭ್ಯವಾಗಿ ವರ್ತಿಸಿದ್ದಾನೆ ಮಹಿಳೆಯ ಅಂಗಾಂಗ ಮುಟ್ಟಿ, ಎಳೆದಾಡಿ ದೌರ್ಜನ್ಯ ಎಸಗಿದ್ದಾನೆ. ಕಾರು ಬಳಿ ಬಲವಂತವಾಗಿ ತಬ್ಬಿಕೊಂಡು ಮುತ್ತು ಕೊಡಲು ಯತ್ನಿಸಿದ್ದಾನೆ.
ಅಲ್ಲದೇ ಮಹಿಳೆಯನ್ನು ಬಲವಂತವಾಗಿ ಕಾರಿನ ಒಳಗಡೆ ಎಳೆದುಕೊಳ್ಳಲು ಯತ್ನಿಸಿದ್ದಾನೆ. ಘಟನೆ ಸಂಭಂದ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಸಂತೃಪ್ತ ಮೇಲೆ ದೂರು ನೀಡಿದ್ದಾರೆ. ಸಂತ್ರಸ್ತೆ ಮಹಿಳೆ ದೂರು ನೀಡಿದ ಆಧಾರದ ಮೇಲೆ ಸದ್ಯ ಡಾಕ್ಟರ್ ಮಲ್ಲುನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








