ಬೆಂಗಳೂರು : ಗುಪ್ತಾಂಗದಲ್ಲಿ ಡ್ರಗ್ಸ್ ಬಚ್ಚಿಟ್ಟು ಪರಪ್ಪನ ಅಗ್ರಹಾರ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದಾಳೆ. ಈ ಕುರಿತು ಜೈಲಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಯುವತಿಯನ್ನ ಬಂಧಿಸಲಾಗಿದೆ. ರಿತಿಕಾ ರೈ ಬಂಧಿತ ಯುವತಿ ಎಂದು ತಿಳಿದುಬಂದಿದೆ.
ಅಪರಾಧ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾಧೀನ ಕೈದಿ ಪರ್ಹಾನ್ ಖಾನ್ ನನ್ನ ಮಾ.26ರಂದು ಭೇಟಿಯಾಗಲು ಬಂದಿದ್ದಳು.ವಿಸಿಟರ್ ಪಾಸ್ ಪಡೆದು ಸಂದರ್ಶಕರ ಕೊಠಡಿ ಬಳಿ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಅನುಮಾನ್ಪಾಸದ ವಸ್ತುಗಳಿರುವುದನ್ನು ಪತ್ತೆ ಹಚ್ಚಿದ್ದರು. ಈ ಬಗ್ಗೆ ಪರಿಶೀಲಿದಾಗ ಯುವತಿ ಗುಪ್ತಾಂಗದಲ್ಲಿ ನಿಷೇಧಿತ ವಸ್ತುಗಳಾದ ಡ್ರಗ್ಸ್, ಬೀಡಿ ಹಾಗೂ 3 ಏರ್ ಟೆಲ್ ಸಿಮ್ ಕಾರ್ಡ್ ಗಳು ಬಿಳಿ ಬಣ್ಣದ ಕವರ್ನಲ್ಲಿ ಅಡಗಿಸಿಕೊಂಡಿರುವುದು ಪತ್ತೆಯಾಗಿದೆ.
ಕಾರಾಗೃಹದ ಪ್ರಭಾರ ಅಧೀಕ್ಷಕ ಶಿವಾನಂದ ಶಿವಪುರ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿತೆಯನ್ನು ಬಂಧಿಸಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ನಿಷೇಧಿತ ವಸ್ತುಗಳನ್ನು ಸಾಗಾಟ ಯತ್ನ ಆರೋಪದಡಿ ಬಂಧನಕ್ಕೊಳಗಾಗಿದ್ದಳು. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ರಿತಿಕಾ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








