ಆಂಧ್ರಪ್ರದೇಶ : ಇತ್ತೀಚಿಗೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮಾನಸಿಕವಾಗಿ ಮತ್ತು ಇನ್ನೊಂದು ಮತ್ತೊಂದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆಂಧ್ರಪ್ರದೇಶದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು ತರಗತಿಯಿಂದ ಹೊರಗಡೆ ಬಂದ ಏಕಾಏಕಿ ವಿದ್ಯಾರ್ಥಿ ಒಬ್ಬ ಕಾಲೇಜಿನ ಮೂರನೇ ಮಾಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಒಂದು ಘಟನೆ ಆಂಧ್ರಪ್ರದೇಶದ ಅಮರಾವತಿ ಜಿಲ್ಲೆಯಲ್ಲಿ ನಡೆದಿದ್ದು, ನಾರಾಯಣ ಕಾಲೇಜಿನಲ್ಲಿ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಬೆಳಗ್ಗೆ 10 ಗಂಟೆಯ ಸುಮಾರಿಗೆ ತರಗತಿಯ ಮಧ್ಯದಲ್ಲಿ ಏಕಾಏಕಿ ಹೊರಗಡೆ ಬಂದಿದ್ದಾನೆ. ಈ ವೇಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯದಲ್ಲಿ 1ನೇ ವಿಡಿಯೋದಲ್ಲಿ ವಿದ್ಯಾರ್ಥಿ ತರಗತಿಯಲ್ಲಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿರುವಾಗಲೇ ಏಕಾಏಕಿ ಹೊರಗಡೆ ಬಂದಿದ್ದಾನೆ. ಬಳಿಕ ಎರಡನೇ ವಿಡಿಯೋದಲ್ಲಿ ಮೂರನೇ ಮಹಡಿಯ ಚಿಕ್ಕದಾದ ಕಾಂಪೌಂಡ್ ಮೇಲೆ ನಿಂತು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ವಿದ್ಯಾರ್ಥಿ ಜಿಗಿಯುತ್ತಿದ್ದಂತೆ ಆತನ ಸಹಪಾಠಿಗಳೆಲ್ಲರೂ ಕೂಡ ಹೊರಗಡೆ ಓಡಿ ಬಂದು ನಿಂತು ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
😞😞Student Suicide 😳😳
A student from Anantapur who is studying intermediate 1st year at Narayana College committed suicide…Details are yet to be known 🙂↕️#CollegePressure #Suicide #StudentLife pic.twitter.com/AIFeNWSDfY— Nikhil Sai (@Nikhilsai887) January 23, 2025