ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಫೈವ್ ಸ್ಟಾರ್ ಹೊಟೇಲ್’ನಲ್ಲಿ ವಿದೇಶಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಕೋಣೆಯಿಂದ ಹೊರಬಂದು ಗಲಾಟೆ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೇ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹೊಟೇಲ್ ಸಿಬ್ಬಂದಿ ಎಷ್ಟೇ ಓಲೈಸಲು ಯತ್ನಿಸಿದರೂ ಆಕೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಇದೀಗ ಸಂಚಲನ ಮೂಡಿಸಿದ್ದು, ವಿದೇಶಿ ಮಹಿಳೆ ಕಿರುಚುತ್ತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನ ಕೆಲವರು ತಮ್ಮ ಸೆಲ್ಫೋನ್ಗಳಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತ್ರ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಹಿಳೆ ಬೆತ್ತಲೆಯಾಗಿ ಹೊರಬಂದಿದ್ದಾಳೆ. ಹೋಟೆಲ್ ಸಿಬ್ಬಂದಿಯನ್ನ ಕೆಟ್ಟದಾಗಿ ಥಳಿಸಿದ್ದಾರೆ. ಮಹಿಳಾ ಉದ್ಯೋಗಿಯೊಬ್ಬರ ಕೂದಲು ಹಿಡಿದು ಗುದ್ದಿದ್ದು, ಕೋಪಗೊಂಡ ಮಹಿಳೆ ಇತರ ಸಿಬ್ಬಂದಿಯನ್ನ ಪೊಲೀಸರಿಗೆ ಕರೆ ಮಾಡುವಂತೆ ಕೇಳಿಕೊಂಡಳು. ಅದೇ ಸಮಯಕ್ಕೆ ಮತ್ತೊಬ್ಬ ವ್ಯಕ್ತಿ ವಿದೇಶೀ ಪ್ರವಾಸಿಗಳನ್ನ ಸಮಾಧಾನ ಪಡಿಸಲು ಯತ್ನಿಸಿದ್ದು, ಆಕೆ ಮತ್ತಷ್ಟು ಉದ್ರೇಕಗೊಂಡು ಆತನಿಗೆ ಒದ್ದು ಗುದ್ದಿ ಅವಾಂತರ ಮಾಡಿದ್ದಾಳೆ. ಇಷ್ಟಕ್ಕೂ ಈ ವಿದೇಶಿ ಪ್ರವಾಸಿ ಈ ರೀತಿ ಗಲಾಟೆ ಮಾಡಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಆದ್ರೆ, ಈಕೆಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವೀಡಿಯೋ ನೋಡಿದ ನೆಟ್ಟಗರು, ಡ್ರಗ್ಸ್ ಮತ್ತು ಮದ್ಯದ ಅಮಲಿನಲ್ಲಿದ್ದ ಕಾರಣ ವಿದೇಶಿ ಮಹಿಳೆ ಇಷ್ಟೊಂದು ಆಕ್ರೋಶಗೊಂಡಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಬೆಂಬಲಿಸಿದ್ರೆ, ಇನ್ನು ಕೆಲವರು ಕೆಟ್ಟದಾಗಿ ಬೈಯುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ಇಲ್ಲಿದೆ.!
#CovidIsntOver yet and another lethal virus named #Feminism virus is spreading like wildfire in our country. This virus can make ur life hell nywhere and there is no vaccine or treatment for it.
Scene at one of the 5 star hotel of Jaipur#FreeSpeech #BollywoodKiGandagi #newindia pic.twitter.com/hcqFUJ5QJw— NCMIndia Council For Men Affairs (@NCMIndiaa) December 16, 2022