ಉತ್ತರಕನ್ನಡ : ಕಫದಿಂದ ಬಳಲುತ್ತಿದ್ದ ಬಾಲಕಿಯೋರ್ವಳು ತಾಯಿಯ ಜೊತೆಗೆ ಆಸ್ಪತ್ರೆಗೆ ತೆರಳುವಾಗ ಬಸ್ ನಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ನಡೆದಿದೆ.
ಮಾಜಾಳಿ ಗ್ರಾಮದ ಸ್ನೇಹ ಸಾಗರ್ ಕೋಠಾರಿಕರ (8) ಸಾವನ್ನಪ್ಪಿದ ಬಾಲಕಿ ಎಂದು ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ನಿವಾಸಿಯಾಗಿರುವ ಸ್ನೇಹಾ ಕಳೆದ ಮೂರು ದಿನದಿಂದ ಕಫದ ಸಮಸ್ಯೆಯಿಂದ ಬಳಲುತ್ತಿದ್ದಳು. ತಾಯಿ ಮಂಗಳ ಜೊತೆಗೆ ಬಸ್ನಲ್ಲಿ ಸ್ನೇಹ ಕುಮಟಾಗೆ ತೆರಳುತ್ತಿದ್ದಳು.
ಅಮದಳ್ಳಿ ಬಳಿ ತಲೆನೋವು ಹಾಗೂ ವಾಂತಿಯಿಂದ ಸ್ನೇಹ ಅಸ್ವಸ್ಥಳಾಗಿದ್ದಳು. ಕೊಡಲೇ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ನೇಹಳನ್ನು ದಾಖಲಿಸಿದರು. ಅಲ್ಲಿಂದ ಅಂಕೋಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸ್ನೇಹ ಸಾವನಪ್ಪಿದ್ದಾಳೆ ಘಟನೆಯ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.