ತುಮಕೂರು : ತುಮಕೂರು ಜಿಲ್ಲೆಯಲ್ಲಿ ಅಪರಿಚಿತ ಶವದ ತುಂಡುಗಳು ಆತಂಕ ಸೃಷ್ಟಿಸಿವೆ. ರಸ್ತೆ ಯುದ್ಧಕ್ಕೂ ಕವರ್ ಗಳಲ್ಲಿ ಶವದ ತುಂಡುಗಳು ಪತ್ತೆಯಾಗಿವೆ.
ಕೊಳ್ಳಾಲದ ಮುತ್ಕಾಲಮ್ಮ ದೇವಾಲಯದ ಬಳಿಯಲ್ಲಿ ರಸ್ತೆಯಲ್ಲಿ ಶವದ ತುಂಡುಗಳು ಪತ್ತೆಯಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಲಾರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು 3 ಕಿ.ಮೀ ಅಂತರದಲ್ಲಿ ಐದು ಕಡೆ ಶವದ ತುಂಡುಗಳು ಪತ್ತೆಯಾಗಿವೆ. ಇದೀಗ ಶವದ ತುಂಡುಗಳನ್ನು ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ.