ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ನಾಯಿ ಮುದ್ದು ಮಾಡು ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಪರಿಚಿತನಿಂದ ಯುವತಿಯ ಮೈ ಕೈ ಮುಟ್ಟಿ ವರ್ತನೆ ತೋರಿದ್ದಾನೆ.
ಈ ಒಂದು ಘಟನೆ ನಡೆದಿದ್ದು ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಪಕಾರ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬೆಂಗಳೂರಲ್ಲಿ ವಾಕಿಂಗ್ ಗೆ ಎಂದು ಯುವತಿ ತನ್ನ ಮುದ್ದಿನ ನಾಯಿಯೊಂದಿಗೆ ತೆರಳಿದ್ದಾಳೆ ಈ ವೇಳೆ ಅಪಚಿತ ಕಾಮುಕನೊಬ್ಬ ಬಂದು ನಾಯಿಯನ್ನು ಮುಟ್ಟಬಹುದಾ ಎಂದು ಕೇಳಿ ಯುವತಿಯ ಮೈಕೈ ಮುಟ್ಟಿಯ ಅಸಭ್ಯ ವರ್ತನೆ ತೋರಿದ್ದಾನೆ.
ಇದರಿಂದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ, ಆದರೂ ಕೂಡ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಭಯಗೊಂಡು ಯುವತಿ ಓಡಿದ್ದಾಳೆ. ಓಡುವ ವೇಳೆ ಆಕೆಯ ಬಳಿದಂತಹ ಮೊಬೈಲ್ ಅನ್ನು ಕಸಿದು ಕಾಮುಕ ಪರಾರಿಯಾಗಿದ್ದಾನೆ.








