ತುಮಕೂರು : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಮಾರಣಹೋಮ ನಡೆದಿತ್ತು. ಇಂದು ತುಮಕೂರಿನಲ್ಲಿ ರಾಷ್ಟ್ರ ಪಕ್ಷಿ ನವಿಲುಗಳ ನಿಗೂಢ ಸಾವಾಗಿದೆ. ಮಿಡಿಗೇಶಿಯ ಹನುಮಾನ್ಪುರದಲ್ಲಿ 19 ನವಿಲುಗಳು ನಿಗೂಢವಾಗಿ ಸಾವನಪ್ಪಿವೆ. ಐದು ಗಂಡು ನವಿಲು ಹಾಗು 14 ಹೆಣ್ಣು ನವಿಲುಗಳು ಸಾವನ್ನಪ್ಪಿವೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಿಡಿಗೇಶಿಯ ಹನುಮಾಂಪುರ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನಿನಲ್ಲಿ ಆಗಸ್ಟ್ 1ರಂದು ರಾತ್ರಿ ನವಿಲುಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಜಮೀನಿಗೆ ಬಂದಾಗ ರೈತರ ಕಣ್ಣಿಗೆ ಒಂದು ನವಿಲುಗಳ ಮೃತ ದೇಹಗಳು ಕಂಡುಬಂದಿವೆ. ನವಿಲುಗಳು ಸಾವನಪ್ಪಿದ ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮತ್ತು ಪಶು ವೈದ್ಯರು ಸ್ಥಳಕ್ಕೆ ಬಂದು ಪೋಸ್ಟ್ ಮಾಟಂ ಮಾಡಿ ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ ಎಂದು ಸ್ಥಳೀಯ ರೈತರು ಒಬ್ಬರು ಮಾಹಿತಿ ನೀಡಿದರು.