ಚೆನ್ನೈ : ಪ್ರತಿದಿನ ಫಾಸ್ಟ್ ಫುಡ್ ತಿನ್ನುವವರೇ ಎಚ್ಚರ, ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ರಾಮ್ಮಿ ನಗರದ ಮಹಿಳೆಯೊಬ್ಬರು ಫಾಸ್ಟ್ ಫುಡ್ ತಿಂದ ಪರಿಣಾಮ ಲಿವರ್ ಗೆ ಹಾನಿಯಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು, ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ರಾಮ್ಜಿ ನಗರದ ಆಂಟೋನಿಯರ್ ಸ್ಟ್ರೀಟ್ ನಿವಾಸಿ ಅರುಣ್ (22) ಅವರ ಪತ್ನಿ ಬ್ಯೂಲಾ (18) ಎಂಬ ಮಹಿಳೆ ಫಾಸ್ಟ್ ತಿಂದು ಸಾವನ್ನಪ್ಪಿದ್ದಾರೆ. ಹಲವು ತಿಂಗಳುಗಳಿಮದ ಅರುಣ್ ತನ್ನ ಹೆಂಡತಿಗೆ ರಾತ್ರಿ ವೇಳೆ ನೂಡಲ್ಸ್ ಮತ್ತು ಫ್ರೈಡ್ ರೈಸ್ ತಂದು ಕೊಡುತ್ತಿದ್ದನು. ಈ ಹಿನ್ನೆಲೆ ಬ್ಯೂಲಾ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ಆದ್ದರಿಂದ ಅವರ ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ತಿರುಚ್ಚಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆ ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ಬ್ಯೂಲಾ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಬ್ಯೂಲಾ ಅವರ ಯಕೃತ್ತಿಗೆ ಹಾನಿಯಾಗಿರುವುದು ಕಂಡುಬಂದಿದೆ. ಅವರಿಗೆ ತೀವ್ರ ಚಿಕಿತ್ಸೆ ನೀಡಲಾಯಿತು ಆದರೆ ಉಳಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.