ಹಾವೇರಿ : ಹಾವೇರಿಯಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದ್ದು ಮೃತ ವ್ಯಕ್ತಿಯನ್ನು ಆಂಬುಲೆನ್ಸ್ ನಲ್ಲಿ ಮನೆಗೆ ಕರೆದ ಯುದ್ಧ ಸಂದರ್ಭದಲ್ಲಿ ನಡುವೆ ಒಂದು ಡಾಬಾ ಬಂದಿದೆ ಈ ವೇಳೆ ಪತ್ನಿ ಡಾಬಾ ಬಂತು ಊಟ ಮಾಡುತ್ತೀಯಾ ಎಂದು ಕಣ್ಣೀರುತ್ತಾ ಕೇಳಿದಾಗ ಸತ್ತಿದ್ದ ಪತಿ ತಕ್ಷಣ ಎಂದು ಕುಳಿತಿರುವ ಘಟನೆ ಹಾವೇರಿ ಜಿಲ್ಲೆಯ ಬಳಿಕ ಬಂಕಾಪುರದಲ್ಲಿ ಈ ಘಟನೆ ನಡೆದಿದೆ.
ಹೌದು ಹಾವೇರಿ ಜಿಲ್ಲೆಯ ಬಂಕಾಪುರ ಗ್ರಾಮದ ಬಿಷ್ಣಪ್ಪ ಅಶೋಕ ಗುಡಿಮನಿ (45) ಸತ್ತಿದ್ದ ಎಂದು ಸ್ವಗ್ರಾಮಕ್ಕೆ ಮೃತದೇಹ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿ ಕಣ್ಣೀರಿಟ್ಟಾಗ, ಮೃತವ್ಯಕ್ತಿ ಉಸಿರಾಡಿರುವುದು ಕಂಡುಬಂದಿದೆ.
ಅದಕ್ಕೂ ಮುನ್ನ ಆತನನ್ನು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಖಾಸಗಿ ವೈದ್ಯರು ತಿಳಿಸಿದ್ದರು. ಈ ವೇಳೆ ಆತನ ಮೃತದೇಹವವನ್ನು ಊರಿಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಬದುಕಿರುವ ಅಂಶ ಬೆಳಕಿಗೆ ಬಂದಿದೆ.ತಕ್ಷಣ ಸಂಬಂಧಿಗಳು ಬಿಷ್ಣಪ್ಪನನ್ನು ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರೋದು ದೃಢವಾಗಿದೆ.ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ವೈದ್ಯರು ಕಳುಹಿಸಿಕೊಟ್ಟಿದ್ದಾರೆ. ಮೃತದೇಹ ಎಂದುಕೊಂಡು ತಂದ ಆಂಬ್ಯುಲೆನ್ಸ್‌ನಲ್ಲಿಯೇ ಕಿಮ್ಸ್‌ಗೆ ಕರೆದುಕೊಂಡು ಹೋಗಲಾಗಿದೆ. ಸದ್ಯ ಕಿಮ್ಸ್ ನ ತುರ್ತು ಚಿಕಿತ್ಸಾ ಘಟಕದಲ್ಲಿ ಬಿಷ್ಣಪ್ಪ ಗೆ ಚಿಕಿತ್ಸೆ ನೀಡಲಾಗುತ್ತಿದೆ.