ಚಂಡಿಘಡ : ಮಹಿಳೆಯೊಬ್ಬಳು ಹೆತ್ತ ತಾಯಿಯ ತೊಡೆಗೆ ಕಚ್ಚಿ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿರುವಂತಹ ಬೆಚ್ಚಿ ಬೀಳಿಸೋ ಘಟನೆ ಹರಿಯಾಣದಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ವೈರಲ್ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಗೆ ಪ್ರಾಣಿಗಳ ಮೇಲೆ ಹಲ್ಲೆ ಮಾಡುವಂತೆ ಥಳಿಸುತ್ತಿರುವುದು ಕಂಡುಬಂದಿದೆ. ಇಷ್ಟಕ್ಕೆ ಸುಮ್ಮನಿರದೆ ತಾಯಿಯ ತೊಡೆಗೆ ಕಚ್ಚಿ ಚಿತ್ರಹಿಂಸೆ ನೀಡುತ್ತಿರುವುದು ಸಹ ವಿಡಿಯೋದಲ್ಲಿ ಕಂಡುಬಂದಿದೆ.
ಸಂತ್ರಸ್ತೆ ಅಳುತ್ತಾ ತನಗೆ ಹೊಡೆಯಬೇಡ ಎಂದು ಮಗಳಲ್ಲಿ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಮಹಿಳೆ ತನ್ನ ತಾಯಿಗೆ ಮನಬಂದಂತೆ ಹೊಡೆಯುವುದು, ಕೂದಲನ್ನು ಎಳೆದಾಡುವುದು, ಕಾಲಿನಿಂದ ಒದೆಯುವುದು ಮಾತ್ರವಲ್ಲದೇ ಹಲ್ಲಿನಿಂದ ಕಚ್ಚುವುದು ಕಾಣಿಸಿಕೊಂಡಿದೆ.
ಈ ಒಂದು ಘಟನೆ ಹರಿಯಾಣದಲ್ಲಿ ನಡೆದಿದ್ದು, ತಾಯೆ ಮೇಲೆ ಮಗಳು ಈ ರೀತಿ ಹಲ್ಲೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದರು ಸಹ ಸಹಾಯಕ್ಕೆ ಬರದೇ ವಿಡಿಯೋ ಮಾಡಿಕೊಳ್ಳುತ್ತಿದ್ದರು. I ಕುರಿತು ನೆಟ್ಟಿಗರು ಮಹಿಳೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಪೊಲೀಸರು ಮಹಿಳೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Repost Alert🚨
अपनी ही माँ के साथ ये दरिंदगी
कोई और नहीं बल्कि खुद उसकी बेटी कर रहीआवाज से स्पष्ट है कि वीडियो हरियाणा की है
इतना Repost करें कि ये चुड़ैल पकड़ी जाये
जानवर से भी बदतर होता इंसान 😡 pic.twitter.com/gNPqiPNskd
— Deepak Sharma (@SonOfBharat7) February 27, 2025