ತಮಿಳುನಾಡು : ಇತ್ತೀಚಿಗೆ ಯುವ ಜನತೆಯಲ್ಲಿ ಹೃದಯಾಘಾತ ಒಂದು ತೀವ್ರವಾಗಿ ಕಾಡುತ್ತಿದೆ. ಪ್ರಸ್ತುತ ದಿನಗಳಲ್ಲಿ ಯುವಜನರು ಹೃದಯಾಘಾತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಇದೀಗ ತಮಿಳುನಾಡಿನ ಮಿಲ್ಲುಪುರಂನಲ್ಲಿ ಘೋರ ಘಟನೆ ನಡೆದಿದ್ದು ವಿದ್ಯಾರ್ಥಿ ಒಬ್ಬ ತರಗತಿಗೆ ಬಂದು ಕುಳಿತ ಕೂಡಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ತಮಿಳುನಾಡಿನ ಮಿಲ್ಲುಪುರಂನ ಹೈಯರ್ ಸೆಕೆಂಡರಿ ಕಾಲೇಜಿನಲ್ಲಿ ಪ್ರಥಮ ವರ್ಷ ಪಿಯುಸಿ ಓದುತ್ತಿದ್ದ ಮನೋಹರ ಎಂಬ ವಿದ್ಯಾರ್ಥಿ ಆಗ ತಾನೇ ತರಗತಿಗೆ ಬಂದು ಕುಳಿತಿದ್ದಾನೆ. ತರಗತಿಗೆ ಬರುವ ಮೊದಲೇ ಆತನಿಗೆ ಸುಸ್ತು ಕಾಣಿಸಿಕೊಂಡಿತು. ತರಗತಿಗೆ ಬಂದು ಬೆಂಚ್ ಮೇಲೆ ಕುಳಿತಾಗ ಏಕಾಏಕಿ ಕುಸಿದು ಬಲಕ್ಕೆ ವಾಲಿದ್ದಾನೆ. ತಕ್ಷಣ ಸಹಪಾಠಿಗಳು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಆಡಳಿತ ಮಂಡಳಿಯವರು, ವಿದ್ಯಾರ್ಥಿ ಮನೋಹರನನ್ನು ಆಸ್ಪತ್ರೆಗೆ ಸಾಗಿಸಿದರು ಆದರೆ ವೈದ್ಯರು ಮನೋಹರ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.