ಬೆಂಗಳೂರು : ಬೆಂಗಳೂರಿನಲ್ಲಿ ತಿಗಣಿ ಔಷಧಿ ವಾಸನೆಗೆ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿರುಪತಿ ಮೂಲದ ಪವನ್ ಎಂದು ತಿಳಿದುಬಂದಿದೆ. HAL ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಆಗಿರುವಂತಹ ಘಟನೆಗಾಗಿದ್ದು, ಪವನ್ ವಾಸವಿದ್ದ ಪಿಜಿ ಅಲ್ಲಿ ತಿಗಣಿ ಔಷಧಿಯನ್ನು ಸಿಂಪಡಣೆ ಮಾಡಿದ್ದಾರೆ.ಈ ವಿಚಾರ ಗೊತ್ತಿಲ್ಲದೇ ಆದ ತನ್ನ ರೂಮ್ಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಬಿಟೆಕ್ ವಿದ್ಯಾರ್ಥಿಯಾಗಿದ್ದ ಪವನ್ ಈತ ವಾಸವಾಗಿದ್ದ ಕೊಠಡಿ ಯಲ್ಲಿ ತಿಗಣೆ ಔಷಧಿ ಸಿಂಪಡನೆ ಮಾಡಲಾಗಿರುತ್ತದೆ. ಈ ಮಾಹಿತಿ ಪವನ್ ಗೆ ಗೊತ್ತಿರಲಿಲ್ಲ. ನಿನ್ನೆ ರಾತ್ರಿ ಈತ ಹೋಗಿ ಮಲಗಿಕೊಂಡಿದ್ದು ಬೆಳಿಗ್ಗೆ ಎದ್ದ ತಕ್ಷಣ ನೋಡಿದಾಗ ಈತ ಶವವಾಗಿ ಪತ್ತೆ ಆಗಿದ್ದಾನೆ. ಹಾಗಾಗಿ ತಿಗಣೆ ಔಷಧದ ವಾಸನೆಗೆ ಪವನ್ ಸಾವ್ಕಾನ್ನಪ್ಪಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ HAL ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.