ಬೆಂಗಳೂರು : ಖಾಸಗಿ ಅಪಾರ್ಟ್ಮೆಂಟ್ನ ಇಂಗು ಗುಂಡಿಯಲ್ಲಿ ಅಸ್ತಿ ಪಂಜರ ಪತ್ತೆಯಾಗಿದ್ದು ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ ಎರಡು ದಿನದ ಹಿಂದೆ ನಾಲ್ಕೈದು ಅಸ್ತಿ ಪಂಜರದ ಅವಶೇಷಗಳು ಪತ್ತೆಯಾಗಿವೆ. ಇದರಿಂದ ಸಹಜವಾಗಿ ಅಪಾರ್ಟ್ಮೆಂಟ್ನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಹೌದು ಬೆಂಗಳೂರಿನ ಬೇಗೂರಿನಲ್ಲಿ ಇರುವ ಅಪಾರ್ಟ್ಮೆಂಟ್ವೊಂದರಲ್ಲಿ ಒಳಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಹಲವು ಭಾಗಗಳು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆಗ್ನೇಯ ಬೆಂಗಳೂರಿನ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿದೆ. ಶೌಚಗುಂಡಿ ಸ್ವಚ್ಚಗೊಳಿಸುವಾಗ ಕಾರ್ಮಿಕರಿಗೆ ಇವೆಲ್ಲಾ ಸಿಕ್ಕಿದ್ದು, ಅವರು ಒಮ್ಮೆ ಶಾಕ್ಗೆ ಒಳಗಾಗಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಕರಣ ಸಂಬಂಧ ಪೂರ್ವ ವಿಭಾಗದ ಜಂಟಿ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯೆ ನೀಡಿದ್ದು, ಅಪಾರ್ಟ್ಮೆಂಟಿನ ಇಂಗು ಗುಂಡಿಯಲ್ಲಿ ಪಳೆಯುಳಿಕೆ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಪುರುಷರ ಅಸ್ತಿಪಂಜರದ ರೀತಿ ಕಾಣಿಸುತ್ತಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ರಮೇಶ್ ಬಾನೂತ್ ಮಾಧ್ಯಮಗಳಿಗೆ ಉತ್ತರಿಸಿದರು. ಪೊಲೀಸರು ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ. ವರದಿಯ ಬಳಿಕ ಇದು ಯಾರದ್ದು ಎನ್ನುವ ಸ್ಪಷ್ಪತೆ ಸಿಗಲಿದೆ. ಮೂಳೆಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಜೂನ್ 16 ರಂದು ಗುತ್ತಿಗೆ ಕಾರ್ಮಿಕರು ಕಾರು ನಿಲ್ದಾಣದ ಬಳಿಯ ಒಳಚರಂಡಿ ಗುಂಡಿಯನ್ನು ತೆರವುಗೊಳಿಸುತ್ತಿದ್ದಾಗ ಮೂಳೆಗಳು ಕಂಡುಬಂದವು, ಇದರಲ್ಲಿ ತಲೆಬುರುಡೆಯ ತುಣುಕುಗಳು ಸೇರಿವೆ ಎಂದು ಭಾವಿಸಲಾಗಿದೆ. ಅವರು ತಕ್ಷಣ ನಿವಾಸಿಗಳ ಕಲ್ಯಾಣ ಸಂಘದ ಮುಖ್ಯಸ್ಥರಿಗೆ ಮಾಹಿತಿ ನೀಡಿದರು, ನಂತರ ಅವರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿದುಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಈ ಕುರಿತು ಪತ್ತೆಯಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.