ರಾಯಚೂರು : ರಾಯಚೂರಿನಲ್ಲಿ ಭೀಕರವಾದ ಕೊಲೆಯಾಗಿದ್ದು, ಹಣ ನೀಡದಿದ್ದಕ್ಕೆ ಪಾಪಿ ಮಗನೊಬ್ಬ ಕಲ್ಲಿನಿಂದ ಜಜ್ಜಿ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಜಕ್ಕೇರುಮಡು ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಗ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆಗೈದಿದ್ದಾನೆ.
ಕಲ್ಲಿನಿಂದ ತಲೆಗೆ ಹೊಡೆದು ತಾಯಿ ಚಂದವ್ವನನ್ನ ಮಗ ಕುಮಾರ್ ಕೊಲೆ ಮಾಡಿದ್ದಾನೆ. ದುಡಿದು ತಿನ್ನೋ ಬದಲು ತಾಯಿಯ ಬಳಿ 2 ಲಕ್ಷ ಹಣ ಕೇಳಿದ್ದ ತಮ್ಮನ ಮದುವೆಗೆ ಹಣವಿಲ್ಲ ಎಲ್ಲಿಂದ ಕೊಡಲಿ ಅಂತ ತಾಯಿ ಚಂದ ಹೇಳಿದ್ದಾಳೆ. ಆರೋಪಿ ಕುಮಾರ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಊರಿಗೆ ಬಂದಾಗ ಪ್ರತಿ ಬಾರಿ ಹಣ ಕೇಳುತ್ತಿದ್ದ ಪ್ರತಿ ಬಾರಿ ಹಣಕ್ಕಾಗಿ ಕುಮಾರ್ ತಾಯಿಯನ್ನ ಹಣಕ್ಕಾಗಿ ಪೀಡಿಸುತ್ತಿದ್ದ.
ಎರಡು ಲಕ್ಷ ಹಣ ನೀಡುವಂತೆ ನಿನ್ನ ತಾಯಿಗೆ ಡೆಡ್ ಲೈನ್ ನೀಡಿದ್ದ. ತಾಯಿ ಹಣ ನೀಡದಿದ್ದಾಗ ಕುಮಾರ್ ಕೊಲೆ ಮಾಡಿದ್ದಾನೆ ಮುದಗಲ್ ಠಾಣೆ ಪೊಲೀಸರ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ತಾಯಿ ಕೂದಲು ಹಿಡಿದು ಎಳೆದಾಡಿದ್ದಾನೆ. ಗ್ರಾಮದ ಸತ್ಯ ಸೇವಾಲಾಲ್ ಭವನದ ಬಳಿ ಎಳೆದೋಯ್ದು ಹಲ್ಲೆ ಮಾಡಿದ್ದಾನೆ ಭವನದ ಗೋಡೆಗೆ ತಲೆಯನ್ನು ಹೊಡೆದು ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸದ್ಯ ಮುದುಗಲ್ ಠಾಣೆ ಪೊಲೀಸರು ಆರೋಪಿ ಕುಮಾರರನ್ನು ಅರೆಸ್ಟ್ ಮಾಡಿದ್ದಾರೆ.








