ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಮಲತಂದೆಯೇ 7 ವರ್ಷದ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಕುಂಬಳಗೂಡು ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಮಗುವಿನ ಮುಖಕ್ಕೆ ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಿನ್ನೆ ಸಂಜೆ ಕೊಲೆ ಮಾಡಿ ಮಲತಂದೆ ದರ್ಶನ್ ಪರಾರಿಯಾಗಿದ್ದಾನೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದಾರೆ.
ಗಂಡನ ಬಿಟ್ಟು ಮಗಳ ಜೊತೆಗೆ ಶಿಲ್ಪಾ ಎಂಬ ಮಹಿಳೆ ವಾಸವಾಗಿದ್ದರು. ಈ ವೇಳೆ ಇನ್ ಸ್ಟಾಗ್ರಾಂನಲ್ಲಿ ಆರೋಪಿ ದರ್ಶನ್ ಶಿಲ್ಪಾಗೆ ಪರಿಚಯವಾಗಿದ್ದ, ಬಳಿಕ ದರ್ಶನ್ ನನ್ನು ಶಿಲ್ಪಾ ಎರಡನೇ ಮದುವೆಯಾಗಿದ್ದರು. ಮೊನ್ನೆ ಶಿಲ್ಪಾ ಜೊತೆಗೆ ಜಗಳವಾಡಿದ್ದ ದರ್ಶನ್ ನಿನ್ನೆ ಸಂಜೆ ಮಲಮಗಳು ಸಿರಿಯನ್ನು ಕೊಂದು ಪರಾರಿಯಾಗಿದ್ದಾನೆ.
 
		



 




