ಬೆಂಗಳೂರು : ಸಮಾಜದಲ್ಲಿ ಇಂತಹ ಗಂಡಸರು ಇರ್ತಾರ ಅಂತ ಒಮ್ಮೊಮ್ಮೆ ಆಶ್ಚರ್ಯ ಆಗುತ್ತ. ಇದೀಗ ಬೆಂಗಳೂರಿನಲ್ಲಿ ವರದಕ್ಷಿಣೆಗಾಗಿ ಪತಿಯಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. 4 ಕೋಟಿ ರೂಪಾಯಿ ವರದಕ್ಷಿಣೆ ಕೊಡದಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯ ವಾಟ್ಸಾಪ್ ಗ್ರೂಪ್ ಗಳಲ್ಲಿ ಖಾಸಗಿ ಫೋಟೋ ವೈರಲ್ ಮಾಡಿ ಕಿರುಕುಳ ನೀಡಿದ್ದಾನೆ. ಪತಿ ವಂದೇಮಾತರಂ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಾರೆ.
ಪಶ್ಚಿಮ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಇದೀಗ ಪತ್ನಿಯ ದೂರು ಆಧರಿಸಿ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ರಾಜಸ್ಥಾನದ ಬಲೋತ್ರ ಜಿಲ್ಲೆಯ ದಂಪತಿ ವಾಸವಾಗಿದ್ದಾರೆ ಸ್ವಂತ ಬಿಜಿನೆಸ್ ಮಾಡಲು 4 ಕೋಟಿ ರೂಪಾಯಿ ವರದಕ್ಷಿಣೆಗಾಗಿ ವಂದೇ ಮಾತರಂ ತನ್ನ ಪತ್ನಿಯ ಬಳಿ ಬೇಡಿಕೆ ಇಟ್ಟಿದ್ದಾನೆ ಹಣ ತರದಿದಕ್ಕೆ ವಾಟ್ಸಾಪ್ ಗ್ರೂಪ್ಗಳಲ್ಲಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ. ಈ ವಿಚಾರವನ್ನು ಸಂಬಂಧಿಕರು ಸಂತ್ರಸ್ಥೆಗೆ ತಿಳಿಸಿದ್ದಾರೆ. ವಿಚಾರ ಗೊತ್ತಾಗಿ ಪತಿಯನ್ನು ವಿಚಾರಿಸಿದಾಗ ಆಕೆಯ ಮೇಲೆ ಪತಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.