ಬೆಂಗಳೂರು : ರಾಜ್ಯದ ಆಸ್ಪತ್ರೆಗಳಲ್ಲಿ ಬಳಸುವಂತಹ ‘IV’ ಫ್ಲುಯೆಡ್ ಅಸುರಕ್ಷಿತವಾಗಿವೆ. ಈ ಕುರಿತು ರಾಜ್ಯದ ಲ್ಯಾಬ್ ನಲ್ಲಿ ಸುಮಾರು 92 ಐವಿ ಫ್ಲುಯೆಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 22 ಅಸುರಕ್ಷಿತ ಎಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಹೌದು 92 ಐವಿ ಫ್ಲುಯೆಡ್ ಗಳಲ್ಲಿ 22 ‘ಐವಿ ಫ್ಲ್ಯೂಯೆಡ್’ ರಿಪೋರ್ಟ್ ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಲ್ ಅಂಶ ಪತ್ತೆಯಾಗಿದೆ. ಆಸ್ಪತ್ರೆಗಳಲ್ಲಿ ಬಳಸೋ ಬಹುತೇಕ ಐವಿ ಫ್ಲುಯೆಡ್ ಅಸುರಕ್ಷಿತ ಎಂದು ವರದಿ ಬಂದಿದೆ. 92 ಸ್ಯಾಂಪಲ್ಗಳ ರಿಪೋರ್ಟ್ ನಲ್ಲಿ 22 ಅಸುರಕ್ಷಿತ ಎಂದು ರಾಜ್ಯದ ಲ್ಯಾಬ್ ನಲ್ಲಿ ಈ ಒಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ.
ರಾಜ್ಯದ ಐವಿ ಫ್ಲುಯೆಡ್ ವರದಿಯಲ್ಲಿ ಶಾಕಿಂಗ್ ವರದಿ ಬಹಿರಂಗವಾಗಿದೆ. 92 ಸ್ಯಾಂಪಲ್ಸ್ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ 22 ಅಸುರಕ್ಷಿತ ಎಂದು ತಿಳಿದು ಬಂದಿದೆ. 22 ನಲ್ಲಿ ಫಂಗಸ್ ಸೇರಿದಂತೆ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ. ಐ ವಿ ಫ್ಲೂಯೆಡ್ ರಿಪೋರ್ಟ್ ನಲ್ಲಿ ಸುರಕ್ಷಿತ ಎಂದು ಉಲ್ಲೇಖವಾದ ಹಿನ್ನೆಲೆಯಲ್ಲಿ ಕೇಂದ್ರದ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಪತ್ರ ಬರೆದಿದೆ.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತರಿಂದ ಪತ್ರ ಬರೆಯಲಾಗಿದ್ದು, ಸಂಪೂರ್ಣ ವಿವರಣೆ ಕೇಳಿ ಡಿಸಿಜಿಐಗೆ ಹರ್ಷಗುಪ್ತ ಪತ್ರ ಬರೆದಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳ ಕೇಂದ್ರದ ಲ್ಯಾಬ್ ಗೆ ಸ್ಯಾಂಪಲ್ ರವಾನಿಸಲಾಗಿದೆ. ಡಿಸೆಂಬರ್ 9 ರಂದು ಲ್ಯಾಬ್ ವರದಿ ಬರಲಿದೆ.