ಮಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಅಮಲು ಪದಾರ್ಥ ನೀಡಿ ಯುವತಿ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಅ.8 ರಂದು ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತೆ ಯುವತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನ್ನ ಮನೆಯ ಫ್ರಿಡ್ಜ್ ಕೆಟ್ಟು ಹೋಗಿತ್ತು, ಮನೆಯಲ್ಲಿ ಒಬ್ಬಳೇ ಇರುವುದರಿಂದ ಶಫಿನ್ ಗೆ ಕರೆ ಮಾಡಿ ರಿಪೇರಿಯವರನ್ನು ಮನೆಗೆ ಕರೆಸಿ ಫ್ರಿಡ್ಜ್ ರಿಪೇರಿ ಮಾಡಿಸಲು ಹೇಳಿದ್ದೆ, ಆತ ಬಂದು ಸರಿ ಮಾಡಿದ್ದನು. ನಂತರ ಎಲೆಕ್ಟ್ರಿಶಿಯನ್ ನನ್ನು ಬಿಟ್ಟು ಬರುವುದಾಗಿ ಹೇಳಿ ಶಫಿನ್ ಹೋಗಿದ್ದಾನೆ.
ಕೆಲಹೊತ್ತಿನ ಬಳಿಕ ಮನೆಗೆ ಶಫಿನ್ ವಾಪಸ್ ಬಂದಿದ್ದು, ಆತ ತಂದ ಹಣ್ಣಿನ ಜ್ಯೂಸ್ ಕುಡಿದು ನಿದ್ದೆಗೆ ಜಾರಿದೆ. ಬಳಿಕ ಎಚ್ಚರಗೊಂಡಾಗ ನನ್ನ ಮೇಲೆ ದೈಹಿಕ ಸಂಪರ್ಕ ನಡೆಸಿರುವುದು ಗೊತ್ತಾಗಿದೆ. ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಘಟನೆ ಸಂಬಂಧ ಯುವತಿ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.