ಕೊಡಗು : ರೆಸಾರ್ಟ್ ಮಾಲೀಕರು ಮತ್ತು ಪೊಲೀಸರು ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಲೈವ್ ನಲ್ಲಿ ವಿಡಿಯೋ ಮಾಡಿ ರೆಸಾರ್ಟ್ ನ ಮಾಜಿ ನೌಕರರ ಒಬ್ಬ ಲೈವ್ ವಿಡಿಯೋ ದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕೊಟ್ಟು ಎಂಬಲ್ಲಿ ನಡೆದಿದೆ.
ಹೌದು ರೆಸಾರ್ಟ್ ನ ಮಾಜಿ ನೌಕರ ಲೈವ್ ಸೂಸೈಡ್ ಮಾಡಿಕೊಂಡಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯ ಮಾಕೋಟ್ಟು ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದ್ದು, ವರದಿಯಾಗಿದೆ. ಮ್ಯಾಗ್ನೋಲಿಯ ರೆಸಾರ್ಟ್ ಮಾಜಿ ನೌಕರ ಪ್ರವೀಣ್ ಆತ್ಮಹತ್ಯೆಗೆ ಯತ್ನಿಸಿದ್ದು, ರೆಸಾರ್ಟ್ ಮಾಲೀಕರು ಮತ್ತು ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೆಸಾರ್ಟ್ ಮಾಲೀಕರಿಂದ ನನಗೆ ಅನ್ಯಾಯವಾಗಿದೆ. ಅರಣ್ಯ ಒತ್ತುವರಿಯಾಗಿದೆ. ಲೈಸೆನ್ಸ್ ಇಲ್ಲದೆ ವಿಲ್ಲಾ ನಿರ್ಮಾಣ ಮಾಡಿದ್ದಾರೆ. ನಾನು ನನ್ನ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನ ದೇಹ ತೆಗೆಯುವ ಮೊದಲು ಮಾಲೀಕನನ್ನು ಬಂಧಿಸಿ ಎಂದು ಪ್ರವೀಣ್ 15 ನಿಮಿಷಗಳ ಕಾಲ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಆದರೆ ಪೊಲೀಸರು ಪ್ರವೀಣ್ ನಾನು ರಕ್ಷಣೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.