ತುಮಕೂರು : ಇತ್ತೀಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಯೋ ವಿರುದ್ಧರು ಎನ್ನದೆ ಹೃದಯಘಾತ ಹಾಗೂ ಹೃದಯ ತಮ್ಮನ ದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ಸ್ನೇಹಿತರ ಜೊತೆಗೆ ಮಾತನಾಡುತ್ತಿರುವಾಗಲೇ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ ಒಬ್ಬ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.
ಹೌದು ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವನನಪ್ಪಿದ್ದಾನೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಈ ಒಂದು ಘಟನೆ ಸಂಭವಿಸಿದೆ.ಕಾಲೇಜಿನ ಮುಂದೆಯೇ ವಿದ್ಯಾರ್ಥಿ ಶಮಂತ್ (17) ಕುಸಿದು ಬಿದ್ದಿದ್ದಾನೆ.ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಶಮಂತ್ ಕುಸಿದು ಬಿದ್ದಿದ್ದ. ತಕ್ಷಣ ಆದನ್ನು ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.